ಮಧುಗಿರಿ:
ಬರ್ಜರಿಯಾಗಿ ಮಾರಾಟವಾಗುತ್ತಿವೆ ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಗಣೇಶನ ಮೂರ್ತಿಗಳು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ಅರ್ಧ ಅಡಿಗಳಿಂದ ಹಿಡಿದು ಸುಮಾರು ಹನ್ನೆರಡು ಅಡಿಗಳ ವರೆಗೆ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.
ಗಣೇಶನ ಮೂರ್ತಿಗಳನ್ನು ಪೇಪರ್ ಹಾಗೂ ವಾಟರ್ ಕಲರ್ ಗಳನ್ನು ಬಳಸಿ ರಂಗು ರಂಗಿನ ಗಣೇಶಮೂರ್ತಿಗಳನ್ನು ಸುಮಾರು 60 ವರ್ಷಗಳಿಂದ ತಯಾರಿಸಲಾಗುತ್ತಿದೆ ಎಂದು ಶ್ರೀ ದಂಡಿನ ಮಾರಮ್ಮನ ದೇವಾಲಯದ ಅರ್ಚಕರು ಹಾಗೂ ಗಣೇಶ ಮೂರ್ತಿಯ ತಯಾರಕರಾದ ಅರುಣ್ ತಿಳಿಸಿದರು.
ಗೌರಿ-ಗಣೇಶನ ಹಬ್ಬಕ್ಕೆ ಕೆಲವೆ ದಿನಗಳು ಬಾಕಿ ಇದ್ದೂ ಮೂರ್ತಿಗಳ ತಯಾರಿಕೆಯು ಬಹಳ ಬಿರುಸಿನಿಂದ ಸಾಗಿದ್ದು ಈಗಾಗಲೇ ಮೂರ್ತಿಗಳನ್ನು ಪ್ರತಿಷ್ಟಾಪಿಸುವವರು ಅಡ್ವಾನ್ಸ್ ನೀಡಿ ತಮಗಿಷ್ಟವಾದ ಗಣೇಶನ ವಿಗ್ರಹಗಳನ್ನು ಬುಕ್ ಮಾಡಿದ್ದಾರೆ.ಸಿವಿಲ್ ಬಸ್ ನಿಲ್ದಾಣದ ಸಮೀಪ ಹಾಗೂ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.








