ಬೆಂಗಳೂರು
ಶಾಲಾ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಇಂದು ರುಪ್ಸಾ ಕರ್ನಾಟಕ ಅಧ್ಯಕ್ಷ ಲೇಪಾಕ್ಷಿ ಹಾಲನೂರು ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಲಾ ಶಿಕ್ಷಣ ಇಲಾಖೆಗೆ ಮುಂದಿನ ಹದಿನೈದು ದಿನ ಡೆಡ್ಲೈನ್ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲನೂರು ಲೇಪಾಕ್ಷಿ, 15 ದಿನದಲ್ಲಿ ಇಲಾಖೆ ನಡೆಸುತ್ತಿರುವ ಕ್ರಮಗಳಿಂದ ಹಿಂದೆ ಸರಿಯಬೇಕು. ಶಾಲೆಗಳ ನವೀಕರಣಕ್ಕೆ ಇಲಾಖೆಯ 64 ಅಂಶಗಳನ್ನ ನಿಗದಿಪಡಿಸಿ ದಾಖಲೆ ಪಡೆಯುತ್ತಿದೆ. ಇದರಿಂದ ಶಾಲೆಗಳ ನವೀಕರಣ ಪಡೆಯುವುದು ಕಷ್ಟವಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿ ಕೈ ಬಿಡಬೇಕು. ಈ ವಿಚಾರಗಳ ಬಗ್ಗೆ ಹದಿನೈದು ದಿನ ಅಂದರೆ ಆಗಸ್ಟ್ 21 ರವರೆಗೆ ಗಡುವು ನೀಡದ್ದೇವೆ ಎಂದು ಹೇಳಿದ್ದಾರೆ.
ರುಪ್ಸಾ ಸೇರಿದ್ದಂತೆ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸರ್ಕಾರ ಸಭೆ ಮಾಡಬೇಕು. ಇಲಾಖೆಯಿಂದ ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕದೆಯಿದ್ದರೆ ಶಾಲೆ ಬಂದ್ ಮಾಡಿ ಬೆಂಗಳೂರು ಚಲೋ ಮಾಡುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಶೈಕ್ಷಣಿಕ ಉದ್ದೇಶಕ್ಕೆ ಬಳಸುವ ನಿವೇಶನ ಅಥವಾ ಕಟ್ಟಡಗಳಿಗೆ ಕಾನೂನು ಬಾಹಿರವಾಗಿ ಟ್ಯಾಕ್ಸ್ ವಸೂಲಿ ಮಾಡುತ್ತಿದೆ. ಆರ್ಆರ್ ವಿಚಾರದಲ್ಲಿ ಅಧಿಕಾರಿಗಳ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ಸುಲಿಗೆ ಸೇರಿದ್ದಂತೆ ಅನೇಕ ವಿಷಯಗಳಿಗೆ ವಿರೋಧ ವ್ಯಕ್ತಪಡಿಸಲಾಗಿದೆ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಈ ಪ್ರತಿಭಟನೆಗೆ ಸಾಥ್ ನೀಡಿದೆ.