ಶಿವಣ್ಣನ ವಿರುದ್ಧ ಅಪ್ಪು ಫ್ಯಾನ್ಸ್ ಅಸಮಾಧಾನ!

ಬೆಂಗಳೂರು: 

  ತೀವ್ರ ಕುತೂಹಲ ಕೆರಳಿಸಿದ್ದ ನಟ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಶುಕ್ರವಾರ ತೆರೆಕಂಡಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇದರ ನಡುವೆಯೇ ಶಿವಣ್ಣನ ವಿರುದ್ಧ ಕೆಲ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

 ನಟ ಶಿವರಾಜ್ ಕುಮಾರ್ ಅಭಿನಯದ ಮತ್ತು ನರ್ತನ್ ನಿರ್ದೇಶನದ ಭೈರತಿ ರಣಗಲ್ ಚಿತ್ರ ನಿನ್ನೆ ಅದ್ಧೂರಿಯಾಗಿ ತೆರೆಕಂಡಿದ್ದು, ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕುರಿತು ದೊಡ್ಮನೆ ಅಭಿಮಾನಿಗಳು ಖುಷಿಯಾಗಿದ್ದು, ಚಿತ್ರ ಸೂಪರ್ ಹಿಟ್ ಎಂಬ ಟಾಕ್ ಬರುತ್ತಿದೆ.

   ನಟ ಶಿವರಾಜ್ ಕುಮಾರ್ ನಟನೆ, ಚಿತ್ರಕಥೆ ಮತ್ತು ಚಿತ್ರದ ಮೇಕಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಚಿತ್ರವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಏತನ್ಮಧ್ಯೆ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಚಿತ್ರತಂಡದ ವಿರುದ್ಧ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿಲ್ಲ. ದೊಡ್ಮನೆ ಕುಡಿಯನ್ನು ಅವರೇ ನೆನೆಯದೇ ಇದ್ದರೆ ಹೇಗೆ? ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.ಈ ಕುರಿತ ವಿಡಿಯೋಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

Recent Articles

spot_img

Related Stories

Share via
Copy link