ಮಿಡಿಗೇಶಿ :
ಪ್ರತಿ ಹೋಬಳಿಗೊಂದು ನೂರು ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರ್ ತೆರೆಯಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ.ವಿ ವೀರಭದ್ರಯ್ಯನವರು ಮೇ.10 ರಂದು ಮಧುಗಿರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ತಿಳಿಸಿದ್ದರು. ಇದರ ಹಿನ್ನೆಲೆಯಲ್ಲಿಯೇ ಮೇ 11 ರಂದು ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಸೀಲ್ದಾರ್ ರವಿ, ಉಪ ತಹಸೀಲ್ದಾರ್ ಗೌತಮ್, ಕಂದಾಯಾಧಿಕಾರಿ ವೇಣುಗೋಪಾಲ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅರವಿಂದರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಿಜಯ್ ಕುಮಾರ್, ರಾಜಗೋಪಾಲ್ ಸೇರಿದಂತೆ ಎಲ್ಲರೂ ಬೇಡತ್ತೂರು ಗ್ರಾಮ ಸಮೀಪರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.
ನಂತರ ಸದರಿ ಅಧಿಕಾರಿಗಳು ಕೋವಿಡ್-19 ರ ಕಾಯಿಲೆಯಿಂದ ತತ್ತರಿಸಿರುವ ಸಾವಿಗೀಡಾಗಿರುವ ಮನೆಗಳಿಗೆ ಭೇಟಿ ನೀಡುವ ಮೂಲಕ ಕೊರೋನಾ ಪರೀಕ್ಷೆಗಳನ್ನು ಸಹ ಖುದ್ದು ಎ.ಸಿ ಸಾಹೇಬರೆ ಮಾಡಿಸಿದರು. ಕೊರೊನಾ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಧೀರಜ್, ಕೃಷ್ಣಮೂರ್ತಿ, ಮಂಜಮ್ಮ, ನಯನ ಮತ್ತು ಸಾವೀಗೀಡಾದ ಶಿಕ್ಷಕ ರಂಗಧಾಮಯ್ಯನವರ ಮನೆಗೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದರು.
ಪ್ರತಿಯೊಬ್ಬರು ಅಂತರ ಕಾಪಾಡಿಕೊಳ್ಳುವುದು, ವೈದ್ಯರ ಸಲಹೆ ಸೂಚನೆಯಂತೆ ಔಷಧಿ ಉಪಯೋಗಿಸುವುದರ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ಹರೀಶ್, ಬಿ.ಸಿ. ಪ್ರಸನ್ನ ಕುಮಾರ್, ಷಬ್ಬೀರ್, ಗ್ರಾಮ ಪಂಚಾಯಿತಿ ನೌಕರರು, ಮಿಡಿಗೇಶಿ ಪೋಲೀಸ್ ರಕ್ಷಣಾಧಿಕಾರಿ ಬಿ.ಎನ್ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
