ಮಧುಗಿರಿ : ಉಚಿತ ಆಂಬ್ಯೂಲೆನ್ಸ್, ವೈದ್ಯಕೀಯ ಪರಿಕರಗಳ ಕೊಡುಗೆ

 ಮಧುಗಿರಿ : 

      ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮಾಸ್ಕ್‍ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕೆಂದು ಶಾಸಕ ಎಂ.ವಿ.ವೀರಭಧ್ರಯ್ಯ ತಿಳಿಸಿದರು.

       ತಾಲ್ಲೂಕಿನ ಕೈಮರ ಗ್ರಾಮದಲ್ಲಿರುವ ತಮ್ಮ ಸ್ವ ಗೃಹದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆರೋಗ್ಯ ಇಲಾಖೆಗೆ ಎರಡು ಉಚಿತ ಆಂಬ್ಯೂಲೆನ್ಸ್ ಹಾಗೂ ವಿವಿಧ ಇಲಾಖೆಗೆ 200 ಲೀಟರ್ ಸ್ಯಾನಿಟೈಸರ್, 100 ಪಿಪಿಇ ಕಿಟ್, 200 ಬೆಡ್‍ಶೀಟ್ ಮತ್ತು 10,000 ಸಾವಿರ ಮಾಸ್ಕ್‍ಗಳನ್ನು ಉಪವಿಭಾಗಾಧಿಕಾರಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಅನಗತ್ಯವಾಗಿ ಹೊರಗಡೆ ಓಡಾಡದೆ ಎಚ್ಚರಿಕೆ ವಹಿಸಿದರೆ ಈ ರೋಗವನ್ನು ಹತೋಟಿಗೆ ತರಬಹುದು. ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ತಿಳಿಸಿದರು.

      ತಾಲ್ಲೂಕಿನ 6 ಹೋಬಳಿ ಕೇಂದ್ರಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ಕೇಂದ್ರವೂ 100 ಹಾಸಿಗೆಗಳನ್ನು ಒಳಗೊಂಡಿರುತ್ತದೆ. ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಆಂಬ್ಯೂಲೆನ್ಸ್‍ಗಳು ನಿರಂತರ ಸೇವೆಯಲ್ಲಿರುತ್ತವೆ. ಮುಂದಿನ ದಿನಗಳಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕರ ಅನುದಾನದಲ್ಲಿ ಸುಸಜ್ಜಿತ ಆಂಬ್ಯೂಲೆನ್ಸ್ ಕೊಡಿಸುವುದಾಗಿ ಭರವಸೆ ನೀಡಿದರು.

      ತಾಲ್ಲೂಕಿನ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಗಳು ಹಾಗೂ ಪುರಸಭೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಪುರಸಭಾ ಸದಸ್ಯರುಗಳು ಕೂಡ ಸಹಕಾರ ನೀಡುತ್ತಿದ್ದಾರೆ. ಕೊರೊನಾ ಸೋಂಕಿತರು ಆತಂಕಕ್ಕೆ ಒಳಗಾಗದೆ ಮಾನಸಿಕ ಸ್ಥೈರ್ಯದಿಂದ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ ಎಂದರು.

      ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ವೈ.ರವಿ, ಡಿ.ವೈ.ಎಸ್.ಪಿ ಕೆ.ಜಿ.ರಾಮಕೃಷ್ಣ, ಟಿಹೆಚ್‍ಓ ಡಾ.ರಮೇಶ್ ಬಾಬು, ಡಾ.ಎಂ.ಜಿ.ಗಂಗಾಧರ್, ಜಿ.ಪಂ ಎಇಇ ಸುರೇಶ್ ರೆಡ್ಡಿ, ತಾ.ಪಂ.ಇಓ ದೊಡ್ಡಸಿದ್ದಪ್ಪ, ಸಿಡಿಪಿಒ ಅನಿತಾ, ಸಿಪಿಐ ಎಂ.ಎಸ್.ಸರ್ದಾರ್, ಪಿಎಸ್‍ಐ ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ್, ಸದಸ್ಯರಾದ ನಾಗಭೂಷಣ್, ಎಂ.ಆರ್.ಜಗನ್ನಾಥ್, ಮುಖಂಡರಾದ ತುಂಗೋಟಿ ರಾಮಣ್ಣ, ತಿಮ್ಮಣ್ಣ, ಆರ್.ಟಿ.ಪ್ರಭು, ರಂಗನಾಥ್, ಶಿವಪ್ಪ, ವಿಜಯಕುಮಾರ್, ಹನುಮಂತಗೌಡ, ಕಂಭತ್ತನಹಳ್ಳಿ ರಘು, ರವಿ, ಶೈಲಿರವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link