ಅನಗತ್ಯ ಓಡಾಟ : 6 ಕಾರು-30 ದ್ವಿಚಕ್ರ ವಾಹನ ವಶ!!

 ಮಧುಗಿರಿ :

      ಡಿವ್ಯೆಎಸ್‍ಪಿ, ಸಿಪಿಐ ಮತ್ತು ಪಿಎಸ್‍ಐಗಳು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 06 ಕಾರುಗಳು, 30 ದ್ವಿಚಕ್ರ ವಾಹನಗಳನ್ನು ಮಧುಗಿರಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

      ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ದಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್‍ನ ಮುಂಭಾಗ ನೂರಾರು ಗ್ರಾಹಕರು ಗುಂಪುಗೂಡಿ ಕುಳಿತಿರುವುದನ್ಮು ಕಂಡು ಬ್ಯಾಂಕ್ ಸಿಬ್ಬಂದಿಗೆ ಡಿವೈಎಸ್‍ಪಿ ಕೆ.ಜಿರಾಮಕೃಷ್ಣ ಕೊರೋನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಘಟನೆ ಸೋಮವಾರ ನಡೆಯಿತು.

      ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ತಾಲ್ಲೂಕಿನಲ್ಲಿ ಕೋವಿಡ್ -19 ರ ಸೋಂಕು ನಿಯಂತ್ರಣಕ್ಕಾಗಿ ತಾಲ್ಲೂಕು ಆಡಳಿತ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಪಟ್ಟಣದಲ್ಲಿ ನಿಗದಿತ ಸಮಯ ಹೊರತುಪಡಿಸಿ ಉಳಿಕೆ ಸಮಯದಲ್ಲಿ ಅನಗತ್ಯ ವಾಹನಗಳ ಓಡಾಟಕ್ಕೆ ಮುಲಾಜಿಲ್ಲದೆ ಕ್ರಮ ಕೈ ಗೊಂಡಿರುವ ಮಧುಗಿರಿ ಉಪವಿಭಾಗದ ಡಿ.ವೈ.ಎಸ್ಪಿ ಕೆ.ಜಿ.ರಾಮಕೃಷ್ಣ ಮತ್ತು ಸಿ.ಪಿ.ಐ ಎಂ.ಎಸ್.ಸರ್ದಾರ್, ಪಿಎಸ್‍ಐ ಮಂಗಳಗೌರಮ್ಮ ತಾವೇ ಸ್ವತಃ ರಸ್ತೆಗಿಳಿದು ವಾಹನಗಳ ತಪಾಸಣೆ ಮಾಡಿ, ವಿನಾಕಾರಣ ಓಡಾಡುತ್ತಿದ್ದ ವಾಹನಗಳ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿದ್ದಾರೆ.

      ಪ್ರಮುಖ ರಸ್ತೆಗಳಲ್ಲಿ ಸರ್ಪಗಾವಲಿನಂತೆ ತಮ್ಮ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಇವರ ಶ್ರಮಕ್ಕೆ ಅನಗತ್ಯ ಓಡಾಟದ ವಾಹನಗಳ ಸವಾರರು ಹೆದರಿದ್ದಾರೆ. ಅನಗತ್ಯ ಓಡಾಟಗಳು ಕಡಿಮೆಯೂ ಸಹ ಆಗಿವೆ. ಈ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಅನಗತ್ಯವಾಗಿ ಜನರು ಓಡಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ. ಪಟ್ಟಣವನ್ನು ಹೊರತುಪಡಿಸಿ ಹಳ್ಳಿಗಾಡುಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರ ಬಗ್ಗೆ ಹಲವು ದೂರುಗಳು ಕೇಳಿ ಬಂದಿರುವುದರಿಂದ ಗ್ರಾಮಗಳಿಗೂ ಭೇಟಿ ನೀಡಿದರು.
ಇದರಿಂದಾಗಿ ಸೋಂಕು ನಿಯಂತ್ರಣ ಆಗುವುದಿಲ್ಲ, ತಾಲ್ಲೂಕು ಆಡಳಿತದ ಪರಿಶ್ರಮದ ಜೊತೆಗೆ ಜನತೆಯ ಸಹಕಾರ ಅತ್ಯಗತ್ಯವೆಂದು ಪೆÇೀಲೀಸ್ ಇಲಾಖೆಯಿಂದ ಪ್ರಚಾರ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅನಗತ್ಯವಾಗಿ ಗುಂಪು ಕಟ್ಟಿಕೊಂಡು ಅಶ್ವತ್ಥ ಕಟ್ಟೆಗಳಲ್ಲಿ ಕಾಲಹರಣ ಮಾಡದೆ ಮನೆಯಲ್ಲಿರಿ. ಗ್ರಾಮೀಣರು ಓಡಾಡುವುದು, ನಿಗದಿತ ಸಮಯ ಮೀರಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಟ ಮಾಡುವುದು, ಟೀ, ಕಾಫಿ, ತಂಬಾಕು ಅಂಗಡಿಗಳನ್ನು ತೆರೆಯುವುದು, ಜನ ಸೇರಿಸಿಕೊಂಡು ಕೂರುವುದು, ವ್ಯಾಪಾರ ಮಾಡುವುದು ಸೇರಿದಂತೆ ಕೊರೋನ ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಬಹುತೇಕ ಮಂದಿ ಚುನಾಯಿತ ಪ್ರತಿನಿಧಿಗಳು ಮೊರೆ ಹೋಗಿ, ವಾಹನ ಬಿಡಿಸಿ ಎಂದು ಪ್ರಭಾವ ಬೀರುತ್ತಿರುವುದು ಇನ್ನೊಂದೆಡೆ ನಡೆಯುತ್ತಿದೆ.ಹಾಗಾಗಿ ಪೆÇೀಲೀಸರು ಕರ್ತವ್ಯ ನಿರ್ವಹಿಸುವುದೂ ಕಷ್ಟಕರವಾಗುತ್ತಿದೆ.

      ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಹ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರಕ್ಷಕ ಸಿಬ್ಬಂದಿ ಕೊರೋನ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವುದನ್ನು ಗ್ರಾಮಿಣ ಭಾಗದಲ್ಲಿ ಸಹ ಕಾಣಬಹುದಾಗಿದೆ.

      ಪೂಜಾರ ಹಳ್ಳಿಯ ಎಂಎಸ್‍ಐಎಲ್ ಸಿಬ್ಬಂದಿಯೊಬ್ಬರು ತಮ್ಮ ಮಗಳಿಗೆ ಸಂಬಂಧಿಸಿದಂತೆ ದ್ವಿ ಚಕ್ರ ವಾಹನದಲ್ಲಿ ಬ್ಯಾಂಕಿಗೆ ಹಣ ಪಾವತಿ ಮಾಡಲು ಬರುವಾಗ ಸೂಕ್ತ ದಾಖಲೆ ತೋರಿಸಿದರೂ, ಕೋವಿಡ್ ಕೇರ್ ಸೆಂಟರ್‍ನಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಭಟ್ಟರಿಗೂ, ನಿಲಯಪಾಲಕರಿಗೂ ಪೋಲೀಸರು ಲಾಠಿ ರುಚಿ ತೋರಿಸಿ, ತಮ್ಮ ಆಡು ಭಾಷೆಯ ಪದಗಳನ್ನು ಬಳಸಿರುವ ಬಗ್ಗೆಲಿವರುಗಳು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ರೀತಿಯಾದರೆ ನಮಗೆ ಕೆಲಸ ನಿರ್ವಹಿಸುವುದು ಕಷ್ಟ ಎಂದು ದೂರಿರುವ ಘಟನೆ ಪಟ್ಟಣದಲ್ಲಿ ಕಂಡು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link