ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ಕೊರಟಗೆರೆ

       ಕಣ್ಮರೆಯಾಗುತ್ತಿರುವ ದೇಶಿಯ ಸಂಸ್ಕ್ರತಿ ಮತತು ಕಲೆಗಳನ್ನು ಉಳಿಸುವ ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪಅಪ್ಪಿನಕಟ್ಟಿ ತಿಳಿಸಿದರು.

       ಅವರು ಪಟ್ಟಣದ ಪ.ಪಂ ಮುಂಭಾಗದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಜಗತ್ತಿನ ನವೀನ ಪರಂಪರೆಯ ವೇಗದ ಮತ್ತಿನಲ್ಲಿ ದೇಶಿಯ ಸಂಸ್ಕೃತಿ ಮತ್ತು ಕಲೆಗಳು ನಶಿಸುತ್ತಿವೆ, ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶಿಯ ಕಲೆಗಳಿಗೆ ಕನ್ನಡ ಭಾಷೆಯ ಉನ್ನತಿಗೆ ಸಾಕಷ್ಟು ಕಾರ್ಯಕ್ರಮಗಳನ್ನು, ಪ್ರಚಾರವನ್ನು ಮತ್ತು ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಸರ್ಕಾರವೂ ಈ ಕೆಲಸಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುದಾನವನ್ನು ನೀಡುತ್ತಿದೆ.

       ಭಾವಪೂರ್ಣ ಮತ್ತು ಅರ್ಥಪೂರ್ಣವಾದ ದೇಶಿಯ ಕಲೆ, ಭಾಷೆ, ಸಂಸ್ಕ್ರತಿಯನನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು .

        ಜಿ.ಪಂ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ ಮಾತನಾಡಿ ದೇಶಿಯ ಕಲೆಗಳು ಪುರಾತನವಾಗಿ ಪಾರಂಪರಿಕವಾಗಿ ಹಲವಾರು ವರ್ಷಗಳಿಂದ ಹಿರಿಯರ ಮುಖಾಂತರ ತಲೆಮಾರುಗಳಿಂದ ಬರುತ್ತಿರುವ ಕಲೆಗಳಾಗಿವೆ. ಇಂತಹ ಕಲೆ ಮತ್ತು ಸಂಸ್ಕೃತಿ ದಿನಂಪ್ರತಿ ಮರೆಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಇಂತಹ ಕಲೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದೇ ಸೂರಿನಡಿ ಹಲವು ಸಾಂಸ್ಕೃತಿಕ, ಜನಪದ ದೇಶಿಯ ವೈವಿದ್ಯಮಯ ಸಂಸ್ಕೃತಿಯನ್ನು ನೀಡುತ್ತಿರುವುದುಕೊರಟಗೆರೆತಾಲ್ಲೂಕಿಗೆ ಸಂತೋಷದ ವಿಷಯವಾಗಿದೆಎಂದರು.

       ಪ.ಪಂ ಸದಸ್ಯಕೆ.ಆರ್ ಓಬಳರಾಜು ಮಾತನಾಡಿಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ . ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರುನಾಡಿನ ಗಡಿಗಳಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರವಾಗಿದೆ. ಬೇರೆ ದೇಶಗಳಲ್ಲಿ ಭಾರತದ ಮತ್ತು ಕರ್ನಾಟಕದ ಕಲೆ ಮತ್ತು  ಸಂಸ್ಕೃತಿಗಳ ಅನುಕರಣೆಯನ್ನು ವಿದೇಶಿಯರು ಮಾಡುತ್ತಿದ್ದಾರೆ . ಆದರೆ ನಮ್ಮ ದೇಶದಲ್ಲಿ ಪಾಶ್ಚಿಮಾತ್ಯದ ಕಲೆ ಮತ್ತು ಸಂಸ್ಕೃತಿಯ ಅನುಕರಣೆಯ ಗುಂಗಿನಲ್ಲಿ ಯುವಕರು ಬಿದ್ದಿರುವುದು ಶೋಚನೀಯವಾಗಿದೆ . ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶಿಯ ಕಲೆ ಮತ್ತು ಸಂಸ್ಕೃತಿಗೆ ಜೀವತುಂಬುತ್ತಿದೆ ಎಂದರು.

       ಸಾಂಸ್ಕ್ರತಿಕ ಸೌರಭದಲ್ಲಿ ಎಂ.ಪ್ರಭು ಅವರಿಂದ ಮ್ಯಾಜಿಕ್ ಶೋ, ಡಾ. ಲಕ್ಷ್ಮಣ್‍ದಾಸ್‍ ಅವರಿಂದ ರಂಗಗೀತೆ, ಮಲ್ಲಿಕಾರ್ಜುನ ಕೆಂಕೆರೆ ಅವರಿಂದ ಭಾವಗೀತೆ, ನೀಲಾಲಯ ನೃತ್ಯ ಕೇಂದ್ರದಿಂದ ನೃತ್ಯರೂಪಕ, ಸಿದ್ದರಂಗರಾಜು ಅವರಿಂದ ರಂಗಗೀತೆ, ದೊಡ್ಡಯ್ಯ ತಂಡದಿಂದ ಡೋಲು ನೃತ್ಯ, ಕುಮಾರಿ ಲತಾತಂಡದಿಂದ ಸಮ್ಮಾಳ, ಕೊರಟಗೆರೆ ಗೆಜ್ಜೆನಾದ ತಂಡದ ಲೋಕೇಶ್, ದೊಡ್ಡಯ್ಯ, ಮಾರುತಿ, ಹನುಮಂತು, ಇವರಿಂದ ಮಯೂರ ವರ್ಮ, ಕುಮಾರಿ ನಂದಿನಿ ಮತ್ತು ತಂಡದಿಂದ ಕಿತ್ತೂರು ರಾಣಿಚೆನ್ನಮ್ಮ, ಐತಿಹಾಸಿಕ ನಾಟಕಗಳು ನಡೆದವು.

       ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯರಾದ ಪುಟ್ಟನರಸಯ್ಯ, ನಟರಾಜು, ಟಿಎಪಿಸಿಎಂಎಸ್ ಅದ್ಯಕ್ಷ ಕೆ.ವಿ ಮಂಜುನಾಥ್, ಪತ್ರಕರ್ತರ ಸಂಘದ ಅದಕ್ಷ ಕೆ.ವಿ ಪುರುಷೋತ್ತಮ್, ತಾಲ್ಲೂಕು ಕಲಾವಿಧರ ಸಂಘದ ಅದ್ಯಕ್ಷ ಮೈಲಾರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಣ್‍ದಾಸ್, ಕೆಂಕೆರೆ ಮಂಜುನಾಥ್, ಡಾ.ರಾಜ್ ಸೇನೆ ಅದ್ಯಕ್ಷರಾಜಣ್ಣ, ಕಲಾವಿದ ಶ್ರೀನಿವಾಸ್, ಧರ್ಮೆಂದ್ರ, ದೀಪಕ್ ಸೇರಿದಂತೆ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link