ಚಿಕ್ಕನಾಯಕನಹಳ್ಳಿ :
ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ರವರ ಮಗನಾದ ಡಾ.ಅಭಿಜ್ಞಾ ರವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು ಆ ಖಾತೆಯ ಮೂಲಕ ಹಣದ ಬೇಡಿಕೆ ಇಡಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಡಾ.ಅಭಿಜ್ಞಾ ಜೆ ಎಂ ಎಂಬ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಸೃಷ್ಠಿಸಿ ಆ ಖಾತೆಯಿಂದ ನಿಮ್ಮಲ್ಲಿ ಗೂಗಲ್ ಪೇ ಇದೆಯೇ, ನನಗೆ ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಮೊಬೈಲ್ ನಂಬರ್ ತಿಳಿಸಿ ಹಣವನ್ನು ಮೊಬೈಲ್‍ಗೆ ಗೂಗಲ್ ಪೇ ಮಾಡಿ ಎಂದು ಮೆಸೇಜ್ ಕಳುಹಿಸಲಾಗಿದೆ. ಇಂಗ್ಲೀಷ್ ಭಾಷೆಯಲ್ಲಿ ಸಂಭಾಷಣೆ ನಡೆದಿದೆ.
ಈ ನಕಲಿ ಖಾತೆಯ ಬಗ್ಗೆ ಅಭಿಜ್ಞಾ ರವರ ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರದಿಂದರುವ ಬಗ್ಗೆ ಸಂದೇಶ ಕಳುಹಿಸುತ್ತಿದ್ದಾರೆ, ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ಮಾಡಿಕೊಂಡು ಅವರ ಹೆಸರಿನಲ್ಲಿ ಹಣ ಕೇಳುತ್ತಿದ್ದಾರೆ, ಫೇಕ್ ಅಕೌಂಟ್ ಓಪನ್ ಆಗಿದೆ ದಯವಿಟ್ಟು ಯಾರಿಗೆ ಮೆಸೇಜ್ ಬಂದರೂ ರಿಪ್ಲೇ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸರ್ಕಾರದಲ್ಲಿ ಮುಖ್ಯ ಪಾತ್ರ ವಹಿಸುವ, ಪ್ರಭಾವಿ ಜನರ ಹೆಸರಿನಲ್ಲಿ ಹಾಗೂ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಉತ್ತಮ ಹೆಸರು ಮಾಡಿರುವವರ ಹೆಸರಿನಲ್ಲಿ ಮತ್ತು ಅವರ ಮಕ್ಕಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಹಣದ ಬೇಡಿಕೆ ಇಡುವಂತಹ ಪ್ರಕರಣಗಳು ಹಲವು ನಡೆಯುತ್ತಿವೆ, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ನಂಬಿಸಿ ಅವರಿಂದ ಹಣ ವಸೂಲು ಮಾಡುವುದು ಒಂದು ದಂಧೆಯಾಗಿದೆ, ಜನರು ಸಹ ನಕಲಿ ಖಾತೆಯೋ, ಅಸಲಿಯೋ ಎಂದು ತಿಳಿಯದೆ ಇವರಿಂದ ಏನಾದರೂ ಕೆಲಸ, ಕಾರ್ಯಗಳು ನೆರವೇರಬಹುದು ಎಂದು ನಂಬಿ ಆ ಖಾತೆಯನ್ನು ಫಾಲೋ ಮಾಡುತ್ತಾರೆ, ಖಾತೆಯಲ್ಲಿ ಬರುವ ಸಂದೇಶಗಳನ್ನೆಲ್ಲಾ ನಂಬುತ್ತಿದ್ದಾರೆ ಇಂತಹ ನಕಲಿ ಖಾತೆ, ವ್ಯಕ್ತಿಗಳಿಂದ ಜನರು ದೂರವಿರುವುದೂ ಹಾಗೂ ಎಚ್ಚೆತ್ತುಕೊಳ್ಳುವುದು ಒಳ್ಳೆದು .
ಕಳೆದ ಒಂದೆರಡು ದಿನಗಳಿಂದ ನನ್ನ ಹೆಸರಿನಲ್ಲಿ ನಕಲಿ ಫೆಸ್ ಬುಕ್ ಖಾತೆ ತೆರೆದು ಈ ರೀತಿ ಹಣದ ಬೇಡಿಕೆ ಇಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಿಪಟೂರು ಪೊಲೀಸ್ ಡಿ.ವೈಎಸ್.ಪಿ.ಯವರಿಗೆ ದೂರು ನೀಡಿದೆ, ಅವರು ಕಾನೂನು ಕ್ರಮ ಕೈಗೊಳ್ಳುವರು, ನನ್ನ ಪರಿಚಯಸ್ಥರು, ಹಿತೈಷಿಗಳು ಈ ಬಗ್ಗೆ ಎಚ್ಚರದಿಂದರ ಬೇಕು ಎಂಬುದು ನನ್ನ ಮನವಿ.
– ಡಾ.ಅಭಿಜ್ಞಾ ಜೆ.ಎಂ.
ಅಭಿಜ್ಞಾ ಅವರ ನಕಲಿ ಫೇಸ್ಬುಕ್ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ, ಈ ಕೃತ್ಯ ಎಸೆಗಿರುವವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಸೈಬರ್ ಕ್ರೈಂ ಇದಾಗಿರುವುದರಿಂದ ತಜ್ಞರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
– ಚಂದನ್ ಕುಮಾರ್, ಡಿ.ವೈ.ಎಸ್.ಪಿ. ತಿಪಟೂರು.
