ಪೂರ್ಣಾವಧಿ ಆಯುಕ್ತರು ನೇಮಕಗೊಳ್ಳದಿದ್ದರೆ ಆಡಳಿತ ಕುಸಿತ

ತುಮಕೂರು

ಎಸ್.ಹರೀಶ್ ಆಚಾರ್ಯ

     ತುಮಕೂರು ಮಹಾನಗರಪಾಲಿಕೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಎಚ್.ವಿ.ದರ್ಶನ್ ಅವರು ಐಟಿ-ಬಿಟಿ ಇಲಾಖೆಗೆ ವರ್ಗವಾಗಿ ಇಂದಿಗೆ ವಾರ ಕಳೆಯುತ್ತಿದ್ದು, ಕಳೆದೊಂದು ವಾರದಿಂದ ಕಂದಾಯ ಉಪಕಮಿಷನರ್ ಸುಮತಿ ಪ್ರಭಾರ ಆಯುಕ್ತರಾಗಿ ಮುಂದುವರಿದಿದ್ದಾರೆ. ಪಾಲಿಕೆ ಆಡಳಿತ ಸುಲಲಿತ.ಸಮರ್ಪಕವಾಗಿ ಸಾಗಬೇಕಾದರೆ ಪೂರ್ಣಾವಧಿ ಆಯುಕ್ತರು ತ್ವರಿತ ನೇಮಕಗೊಳ್ಳುವ ಅಗತ್ಯವಿದೆ ಎಂಬ ಮಾತುಗಳು ನಾಗರಿಕರಿಂದ ಕೇಳಿಬರಲಾರಂಭಿಸಿದೆ.

     ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪಾಲಿಕೆಗೆ ಆಯುಕ್ತರಾಗಿ ಬಂದ ಐಎಎಸ್ ಅಧಿಕಾರಿ ಎಚ್.ವಿ.ದರ್ಶನ್ ಅವರ ಆರಂಭಿಕ 2-3 ತಿಂಗಳ ಅವಧಿ ಚುನಾವಣೆ ಪ್ರಕ್ರಿಯೆಯಲ್ಲಿ ಕಳೆದುಹೋಯಿತು. ಎರಡು ಬಜೆಟ್ ಸಂಬAಧಿತ ಸಭೆಗಳು, ಕುಡಿಯುವ ನೀರಿನ ಸಂಬAಧದ ತುರ್ತು ಸಭೆ ನಡೆಸಲು ಆಯುಕ್ತರಿಗೆ ಅವಕಾಶವಾಗಿದ್ದು ಬಿಟ್ಟರೆ, ನಗರದ ಪ್ರಗತಿ, ಆಡಳಿತ ವಿಷಯದಲ್ಲಿ ನಿರೀಕ್ಷಿಸಿದಷ್ಟು ಗುರುತರ ಕೆಲಸ ಕಾರ್ಯಗಳಾಗಲಿಲ್ಲ. ಅಥವಾ ಆ ಕೆಲಸವನ್ನು ಮಾಡಲು ಪಟ್ಟಭದ್ರರು ಬಿಡಲೇ ಇಲ್ಲ ಎಂಬ ಮಾತುಗಳು ಪಾಲಿಕೆಯ ಆವರಣದಲ್ಲೆ ಬಹು ಚರ್ಚಿತವಾಗುತ್ತಿದೆ.

    ನಗರದ ಲೇಔಟ್‌ಗಳ ನಿಯಮ ಉಲ್ಲಂಘನೆ ಪರಿಶೀಲನೆಗೆ ಆಯುಕ್ತರಾಗಿದ್ದ ದರ್ಶನ್ ಅವರು ಮುಂದಾಗಿದ್ದೇ ಅವರ ಎತ್ತಂಗಡಿಯಾಗಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ಅವರಿಗೆ ನಿವೇಶನವೇ ಮುಖ್ಯವಾಗಿತ್ತು ಎಂದು ಪಾಲಿಕೆಯ ಕೆಲ ಜನಪ್ರತಿನಿಧಿಗಳ ಮಾತಾದರೆ, ಹಿಂದೆ ಆಯುಕ್ತರಾಗಿದ್ದ ಭೂಬಾಲನ್ ಅವರನ್ನು ಉದಾಹರಿಸಿ, ದಕ್ಷ ಅಧಿಕಾರಿಗಳನ್ನು ಪಾಲಿಕೆಯಲ್ಲಿ ಮುಂದುವರಿಯಲು ಬಿಡೋಲ್ಲವೆಂದು ಸಾಮಾಜಿಕ ಹೋರಾಟಗಾರರು ದೂರುತ್ತಾರೆ.

    ಸ್ಮಾರ್ಟ್ ಸಿಟಿ ಸ್ವತ್ತು ಹಸ್ತಾಂತರದ ಮಹತ್ವದ ಹೊಣೆಗಾರಿಕೆ: ಸ್ಮಾರ್ಟ್ಸಿಟಿಯಾಗಿ ಮೇಲ್ದರ್ಜೆಗೇರಿರುವ ತುಮಕೂರು ಮಹಾನಗರಪಾಲಿಕೆ ಆಡಳಿತ ಸುಗಮ, ವ್ಯವಸ್ಥಿತವಾಗಿ ನಡೆಯಬೇಕಾದರೆ, ದಕ್ಷ, ಕ್ರಿಯಾಶೀಲತೆಯ ಪೂರ್ಣಾವಧಿ ಆಯುಕ್ತರು ನೇಮಕಗೊಳ್ಳುವ ಅಗತ್ಯವಿದೆ. ಸ್ಮಾರ್ಟ್ಸಿಟಿ ಯೋಜನಾ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಯೋಜನೆಯಡಿ ನಿರ್ಮಿಸಿರುವ ಸ್ವತ್ತುಗಳನ್ನು ಪರಿಶೀಲಿಸಿ ಪಾಲಿಕೆಗೆ ಹಸ್ತಾಂತರಿಸಿಕೊಂಡು ನಿರ್ವಹಣೆ ಮಾಡಿಕೊಂಡು ಹೋಗಬೇಕಾದ ಮಹತ್ವದ ಹೊಣೆಗಾರಿಕೆ ನೂತನ ಆಯುಕ್ತರಾಗಿ ಬರುವವರ ಮೇಲಿದೆ.

    ಅಂತೆಯೇ ನೂತನ ಸರ್ಕಾರದ ಆಶಯವಾದ ಇಂದಿರಾ ಕ್ಯಾಂಟೀನ್ ಸುಧಾರಣೆ, ನಗರದ 35 ವಾರ್ಡ್ಗಳ ಮೂಲಸೌಕರ್ಯ ಅಭಿವೃದ್ಧಿ, ರಾಜಗಾಲುವೆ ಒತ್ತುವರಿ ತೆರವು, ಸಮರ್ಪಕ ತ್ಯಾಜ್ಯ ವಿಲೇವಾರಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡುವಂತಹ ಆಯುಕ್ತರು ತುಮಕೂರು ಮಹಾನಗರಪಾಲಿಕೆಗೆ ನೇಮಕಗೊಳ್ಳಬೇಕಿದೆ.

    ವಿಪಕ್ಷ ಶಾಸಕರು ಪ್ರತಿನಿಧಿಸುತ್ತಿರುವ ನಗರ : ಇನ್ನೂ ಪ್ರಸ್ತುತ ತುಮಕೂರು ನಗರವನ್ನು ವಿಪಕ್ಷ ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಇರುವುದರಿಂದ ನೂತನವಾಗಿ ಸರ್ಕಾರದಿಂದ ನೇಮಕಗೊಳ್ಳುವ ಆಯುಕ್ತರು, ಸೂಜಿನ ಮೇಲಿನ ನಡಿಗೆಯಂತೆ ಆಡಳಿತ-ವಿಪಕ್ಷವನ್ನು ಮುನ್ನೆಡೆೆಸಿಕೊಂಡು ನಾಗರಿಕರ ಹಿತಕಾಯಬೇಕಾದ ಸವಾಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap