ಬೆಂಗಳೂರು
ಬೆಂಗಳೂರಿನ ಜನರ ನಿದ್ದೆ ಕೆಡಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದ ಪ್ರಮುಖ ಸಾಲಗಾರ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆರೋಪಿ ರಾಜೇಶ್ ವಿ ಆರ್ ಬ್ಯಾಂಕಿನ ಆಡಳಿತದೊಂದಿಗೆ ಶಾಮೀಲಾಗಿ ಅಪಾರ ಪ್ರಮಾಣದ ಹಣವನ್ನು ವಂಚಿಸಿದ್ದ ಎಂದು ತಿಳಿದುಬಂದಿದೆ.
ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಆತನನ್ನು ಮೂರು ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದ್ದಾರೆ. ರಾಜೇಶ್ ಮತ್ತು ಆತನ ಪತ್ನಿ ಇತರ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿಯೂ ಸಾಲ ಮಾಡಿದ್ದಾರೆ. ಈ ಆಪಾದಿತ ವಂಚನೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳೂ ದಾಖಲಾಗಿವೆ ಎಂದು ಇಡಿ ಹೇಳಿದೆ. ಅವರು ಹೆಬಿಚ್ಯುಲ್ ಅಫೆಂಡರ್‌ಗಳು ಎಂದು ಇಡಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ