ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ ಐತಿಹಾಸಿಕವಾಗಿಸಿ…!

ಕಾಂಗ್ರೆಸ್ ಭವನ ಉದ್ಘಾಟನೆ ಸಿದ್ಧತಾ ಸಭೆಯಲ್ಲಿ ಪರಮೇಶ್ವರ್ ಸೂಚನೆ

ತುಮಕೂರು

      ಕನ್ನಡಿಗರೊಬ್ಬರು ಎಐಸಿಸಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಮಾ.5 ರಂದು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಬರುತ್ತಿದ್ದು, ಈ ಕಾರ್ಯಕ್ರಮವನ್ನು ಐತಿಹಾಸಿಕ ಘಟನೆಯಾಗಿ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎಲ್ಲಾ ಮುಖಂಡರು, ಕಾರ್ಯಕರ್ತರು ಶ್ರಮಿಸುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಖರ್ಗೆ ಸ್ವಾಗತ ಕಾರ್ಯಕ್ರಮ ಹಾಗೂ ಕೊರಟಗೆರೆ ತಾಲೂಕು ಕಾಂಗ್ರೆಸ್ ಭವನದ ಉದ್ಘಾಟನೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕನ್ನಡಿಗರು ಎಐಸಿಸಿ ಅಧ್ಯಕ್ಷರಾಗಿರುವುದೇ ಹೆಮ್ಮೆಯ ಸಂಗತಿ.

     ಅಧ್ಯಕ್ಷರಾಗಿ ಖರ್ಗೆ ಜೀ ಅವರ ಜಿಲ್ಲೆಯ ಮೊದಲ ಭೇಟಿ ಕಾರ್ಯಕರ್ತರು, ಮುಖಂಡರನ್ನು ಪುಳಕಿತಗೊಳಿಸಿದೆ. ಅವರ ಭೇಟಿಯನ್ನು ಹತ್ತರು ವರ್ಷ ನೆನಪಾಗಿ ಉಳಿಯುವಂತೆ ಸ್ಮರಣೀಯವಾಗಿಸಬೇಕಿದೆ ಎಂದರು.

ಶಾಂತಿ ಪ್ರತಿಷ್ಠಾಪನೆಗೆ ಕೈ ಜಯಿಸಲೇಬೇಕಿದೆ

     ಚುನಾವಣೆ ಸನಿಹವಿರುವ ಈಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಇದು ಯುದ್ದದ ಸಮಯ. ರಾಜ್ಯ ಮತ್ತು ದೇಶದಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ನಡುವಿನ ವೈಮನಸ್ಸಿಂದ ಕದಡಿರುವ ಶಾಂತಿಯನ್ನು ಪುನರ್ ಸ್ಥಾಪಿಸಲು ಈ ಯುದ್ದದಲ್ಲಿ ಕಾಂಗ್ರೆಸ್ ಪಕ್ಷ ಜಯಿಸಲೇಬೇಕಿದೆ.

    ಆ ಮೂಲಕ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ತಡೆದು, ಅವರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ಕಾಂಗ್ರೆಸ್ ಪಕ್ಷದ ಖಾತರಿ ಪಡಿಸಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ,ಕರ್ನಾಟಕದ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಹೋರಾಟವಾಗಿದೆ. ಹಾಗಾಗಿ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.ಎಲ್ಲಾ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಪಕ್ಷದ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸೋಣ ಎಂದು ಸಲಹೆ ನೀಡಿದರು.

ಬದಲಾವಣೆ ಬಯಸಿದ್ದಾರೆ:

    ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ,ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ.ಹಾಗಾಗಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಹಲವಾರು ಪ್ರಯತ್ನಗಳು ನಡೆದಿವೆ.ಆದರೆ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ.ಈ ಸುಳ್ಳಿನ ಸರಕಾರವನ್ನು ಕಿತ್ತೊಗೆಯಲು ತುದಿಗಾಲಲ್ಲಿ ನಿಂತಿದ್ದಾರೆ.ನಮ್ಮ ಭರವಸೆಯಾದ ಗೃಹಲಕ್ಷ್ಮಿ  ಯೋಜನೆಯನ್ನು ಜನರ ಮುಂದಿಡುವ ಮೂಲಕ ಪಕ್ಷವನ್ನು ಸದೃಢವಾಗಿ ಬೆಳೆಸುವ ಕೆಲಸ ಮಾಡಿ, ಖರ್ಗೆ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕೆಂದರು.

ಕಾಂಗ್ರೆಸ್ ಸರ್ವಜನರ ಪಕ್ಷ:

     ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ವರ್ಗದ ಜನರಿಗೆ ಅಧಿಕಾರವಿದೆ ಎಂಬುದಕ್ಕೆ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರಿ, ಇಂದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನಖರ್ಗೆ ಅವರ ರಾಜಕೀಯ ಜೀವನವೇ ಸಾಕ್ಷಿ. 5 ರಂದು ಅತಿ ಹೆಚ್ಚು ಜನರು ಸೇರಿ ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

    ಮಾಜಿ ಶಾಸಕರಾದ ಆರ್.ನಾರಾಯಣ್, ಹೆಚ್.ನಿಂಗಪ್ಪ, ಕೆ.ಎಸ್.ಕಿರಣ್‌ಕುಮಾರ್, ಎಂಎಲ್ಸಿ ಆರ್.ರಾಜೇಂದ್ರ, ಮಾಜಿ ಎಂ.ಎಲ್.ಸಿ ಬೆಮೆಲ್ ಕಾಂತರಾಜು,ರೆಡ್ಡಿ ಚಿನ್ನಯಲ್ಲಪ್ಪ, ತಿಪಟೂರು ಲೋಕೇಶ್ವರ್ ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ನಗರ ಟಿಕೆಟ್ ಆಕಾಂಕ್ಷಿಗಳಾದ ಇಕ್ಬಾಲ್ ಅಹಮದ್, ಎಚ್.ಸಿ.ಹನುಮಂತಯ್ಯ, ಅತೀಕ್ ಅಹಮದ್, ಡಾ.ರ‍್ಹಾನ ಬೇಗಂ, ಪಾಲಿಕೆಯ ಕಾಂಗ್ರೆಸ್ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಂಚೂಣಿ ಘಟಕಗಳ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

    ಕರುನಾಡಿನವರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಜಿಲ್ಲೆಗೆ ಅದ್ದೂರಿಯಾಗಿ ಸ್ವಾಗತಿಸಿ,ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅಭಯ ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರುವುದು ಹುಡುಗಾಟದ ಮಾತಲ್ಲ.ಇಡೀ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣವನ್ನು ನಾವೆಲ್ಲರೂ ನಿರ್ಮಾಣ ಮಾಡಬೇಕಾಗಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ ಎಂಬ ಸಂದೇಶವನ್ನು ನಾವೆಲ್ಲರೂ ಕಳುಹಿಸಬೇಕಾಗಿದೆ.       -ಕೆ.ಎನ್.ರಾಜಣ್ಣ, ಮಾಜಿ ಶಾಸಕರು ಕೆಪಿಸಿಸಿ ಉಪಾಧ್ಯಕ್ಷರು.

ಕಾಂಗ್ರೆಸ್ ಭವನ ಪಡೆಯಲು ಕಾನೂನು ಹೋರಾಟ

    ಕೊರಟಗೆರೆ ರೀತಿಯಲ್ಲಿಯೇ ತುಮಕೂರು ಜಿಲ್ಲಾ ಕೇಂದ್ರದಲ್ಲಿಯೂ ಒಂದು ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಿಸುವ ಗುರಿ ಇದೆ. ಇದರ ಜೊತೆಗೆ ಜೆಡಿಎಸ್ ಪಕ್ಷದವರು ಕಬ್ಜಾ ಮಾಡಿರುವ ಕಾಂಗ್ರೆಸ್ ಭವನವನ್ನು ಬೆಂಗಳೂರಿನ ಕಾಂಗ್ರೆಸ್ ಭವನದ ರೀತಿ ಕಾನೂನಾತ್ಮಕ ಹೋರಾಟದ ಮೂಲಕ ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕೆಲಸವೂ ಆಗಬೇಕಿದೆ ಎಂದ ಡಾ.ಜಿ.ಪರಮೇಶ್ವರ್, ಮಾ.5ರ ಕಾರ್ಯಕರ್ತರು ಬಿಜೆಪಿ ಸೋಲಿಸುವ ಜೋಶ್‌ನಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತಷ್ಟು ಬಲ ತುಂಬಲಿದೆ.ಆ ಮೂಲಕ ಇಡೀ ದೇಶಕ್ಕೆ ಹೊಸ ಸಂದೇಶವೊAದನ್ನು ಕಳುಹಿಸಲಿದೆ ಎಂದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap