ಕಾರ್ಮಿಕ ಹಕ್ಕುಗಳ ರಕ್ಷಣೆ : 151 ನೇ ಸ್ಥಾನಕ್ಕೆ ಕುಸಿದ ಭಾರತ..!

ನವದೆಹಲಿ:

     ಕಾರ್ಮಿಕ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಭಾರತ 151 ನೇ ಸ್ಥಾನಕ್ಕೆ ಕುಸಿದಿದೆ ಎಂದು ಆಕ್ಸ್‌ಫ್ಯಾಮ್‌ನ ಕಮಿಟ್ಮೆಂಟ್ ಟು ರೆಡ್ಯೂಸಿಂಗ್ ಇನ್ ಇಕ್ವಾಲಿಟಿ ಇಂಡೆಕ್ಸ್ (ಸಿಆರ್‌ಐಐ) ವರದಿ ಬಹಿರಂಗಪಡಿಸಿದೆ.ದುರ್ಬಲ ಕಾರ್ಮಿಕ ಹಕ್ಕುಗಳು ಮತ್ತು ಉದ್ಯೋಗ ಹೆಚ್ಚಳದ ಸಂಭವನೀಯತೆಯ ಕುಸಿತ  ಭಾರತವು 141 ನೇ ಸ್ಥಾನದಿಂದ 151ಕ್ಕೆ ಕುಸಿಯುವಂತೆ ಮಾಡಿದೆ.ಉತ್ತರ ಪ್ರದೇಶದಲ್ಲಿ ಪುರುಷ ಕಾರ್ಮಿಕರ ಅನೌಪಚಾರಿಕ ವಲಯದ ಅತಿ ಹೆಚ್ಚು ಸಂಖ್ಯೆಯಲ್ಲಿದ್ದು (ಶೇ 86.9 ) ಆಂಧ್ರ ಪ್ರದೇಶದಲ್ಲಿ ಮಹಿಳೆಯರು(ಶೇಕಡಾ 73.6 ) ಈ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,

     ದೆಹಲಿಯಲ್ಲಿ ಅನೌಪಚಾರಿಕ ವಲಯದ ಉದ್ಯೋಗಸ್ಥ  ಮಹಿಳೆಯರ ಸಂಖ್ಯೆ ಶೇಕಡಾ 31.8 ಮತ್ತು ಪುರುಷರು 64.8 ರಷ್ಟಿದ್ದಾರೆ ಎಂದು ವಿಶ್ಲೇಷಣೆ ತಿಳಿಸಿದೆ. ಸಾಂಕ್ರಾಮಿಕ ರೋಗದ ಕಾರಣ  ಅಸಮಾನತೆಯ ಪ್ರಮಾಣ ಹೆಚ್ಚಾಗಿದ್ದು ಇದನ್ನು ಕಡಿಮೆ ಮಾಡಲು ಸರ್ಕಾರಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ತುರ್ತು ಅವಶ್ಯಕತೆಯಿದೆ ಎಂದು ವರದಿ ಶಿಫಾರಸು ಮಾಡಿದೆ.

     ಆದರೆ ಸಾರ್ವಜನಿಕ ಸೇವೆಗಳ ವಿಷಯದಲ್ಲಿ ಭಾರತ  141 ನೇ ಸ್ಥಾನದಲ್ಲಿದೆ.ಒಟ್ಟಾರೆಯಾಗಿ, ಸಿಆರ್ಐ ಸೂಚ್ಯಂಕದಲ್ಲಿ ಭಾರತವು ಸರ್ಕಾರದ ನೀತಿಗಳು ಮತ್ತು ಶಿಕ್ಷಣ, ಆರೋಗ್ಯ, ಸಾಮಾಜಿಕ ರಕ್ಷಣೆ, ತೆರಿಗೆ ಮತ್ತು ಕಾರ್ಮಿಕರ ಹಕ್ಕುಗಳ ಸಾರ್ವಜನಿಕ ಸೇವೆಗಳ ಕ್ಷೇತ್ರಗಳಲ್ಲಿನ ಕ್ರಮದ ಕೋಷ್ಟಕದಲ್ಲಿ 159 ದೇಶಗಳ ಪೈಕಿ ಭಾರತಕ್ಕೆ 129 ಸ್ಥಾನ ಸಿಕ್ಕಿದೆ. ಸಿಆರ್ಐಐ ಜಾಗತಿಕ ವರದಿಯಾಗಿದ್ದು, ಭಾರತ ಸೇರಿದಂತೆ 158 ರಾಷ್ಟ್ರಗಳು ಈ ಬಗ್ಗೆ ವರದಿ ಮಾಡಿದೆ.

        ಭಾರತದ ಆರೋಗ್ಯ ಬಜೆಟ್ ನಾಲ್ಕನೇ ಅತಿ ಕಡಿಮೆ ಜನಸಂಖ್ಯೆಯಾಗಿದ್ದು, ಅದರ ಜನಸಂಖ್ಯೆಯ ಅರ್ಧದಷ್ಟು ಜನರು ಅತ್ಯಗತ್ಯ ಆರೋಗ್ಯ ಸೇವೆಗಳ ಸೌಲಭ್ಯ ಹೊಂದಿದ್ದಾರೆ, ಅಲ್ಲದೆ ಶೇ. 70 ಕ್ಕಿಂತ ಹೆಚ್ಚು ಜನರು ತಮ್ಮ ಆರೋಗ್ಯ ವೆಚ್ಚಗಳನ್ನು ಸ್ವತಃ  ಪೂರೈಸಿಕೊಳ್ಳುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap