ಮಳೆರಾಯನ ಆರ್ಭಟಕ್ಕೆ ಜೀವಕಳೆಯಿಂದ ನಲಿಯುತ್ತಿವೆ ಕೆರೆಗಳು ….!

ಚಾಮರಾಜನಗರ

   ಈಗಾಗಲೇ ರಾಜ್ಯದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ಬಿಸಿಲಿಗೆ ಬತ್ತಿಹೋಗಿದ್ದ ಜಲಮೂಲಗಳಿಗೆ ಇದೀಗ ಜೀವಕಳೆ ಬಂದಂತಾಗಿದೆ. ಹಾಗೆಯೇ ಭಾರಿ ಮಳೆಯಿಂದ ಗಡಿಜಿಲ್ಲೆಯ ಚಾಮರಾಜನಗರದಲ್ಲಿ ತುಂಬಿದ ಪ್ರಮುಖ ಕೆರೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.

   ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಲೇ ಇದೆ. ಇನ್ನು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕಾಡಿನಲ್ಲೂ ಕೂಡ ಹಲವು ಹಳ್ಳ-ಕೊಳ್ಳಗಳಿಗೆ ಜೀವಕಳೆ ಬರುತ್ತಿದೆ.

    ಅದರಲ್ಲೂ ನಿನ್ನೆ (ಮೇ 21) ಸಂಜೆ ವೇಳೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಬಂಡೀಪುರ ಕಾಡಂಚಿನ ಜಕ್ಕಹಳ್ಳಿ, ಮಂಗಲ ಗ್ರಾಮದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಜೋರು ಮಳೆಯಾಗಿದೆ.

    ಹೀಗೆ ಅಬ್ಬರದ ಮಳೆ ಸುರಿಯುತ್ತಿರುವ ಹಿನ್ನೆಲೆ ಬಂಡೀಪುರ ಕಾಡಂಚಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹಂಗಳ ಹಿರೀಕೆರೆ, ಬರಗಿ ಕೆರೆ, ಮುಂಟೀಪುರ ಕೆರೆ ಸೇರಿದಂತೆ ವಿವಿಧ ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಇದರಿಂದ ಸಣ್ಣಪುಟ್ಟ ಹಲವು ಕೆರೆಗಳು ತುಂಬಿದೆ. ಸಣ್ಣಪುಟ್ಟ ಹಳ್ಳ-ಕೊಳ್ಳಗಳು ಕೂಡ ಮಳೆ ನೀರಿನಿಂದ ಉಕ್ಕಿ ಹರಿದಿವೆ.

    ವೆಂಕಟಯ್ಯನಛತ್ರ, ಹೊಸೂರು ಚಿಕ್ಕಹೋಳೆ ಹಾಗೂ ಬಿಸಲವಾಡಿ ಗ್ರಾಮಗಳಲ್ಲಿ ಕಾಲುವೆಗಳು ನದಿಯಂತಾಗಿದ್ದು, ಚನ್ನಪ್ಪನಪುರ-ಅಮಚವಾಡಿ ಸಂಪರ್ಕ ರಸ್ತೆಯಲ್ಲಿ ಇರುವ ಹೆಬ್ಬಾಳ ಶನೇಶ್ವರ ದೇವಸ್ಥಾನದ ಬಳಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap