ಲಖನೌ:
ಕಿನ್ನರ ಅಖಾಡದ ಸ್ಥಾಪಕ ಸದಸ್ಯ ಎಂದು ಹೇಳಿಕೊಳ್ಳುವ ರಿಷಿ ಅಜಯ್ ದಾಸ್ ಅವರು ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಡಾ. ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಉಚ್ಚಾಟಿಸಿ ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಎಂದು ಪಟ್ಟಾಭಿಷೇಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.ಇದಾದ ಬೆನ್ನಲ್ಲೇ ವಾಗ್ದಾಳಿ ನಡೆಸಿರುವ ತ್ರಿಪಾಠಿ, ಅಜಯ್ ದಾಸ್ ಅಖಾಡದ ಸದಸ್ಯತ್ವ ಕೂಡಾ ಪಡೆದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಇಂದು ನಿನ್ನೆಯ ಪತ್ರವೊಂದನ್ನು ಫೋಸ್ಟ್ ಮಾಡಿರುವ ಅಜಯ್ ದಾಸ್, ಕಿನ್ನರ ಅಖಾಡದ ಮಹಾಮಂಡಳೇಶ್ವರ ಆಗಿ ಮಾಡಿರುವುದರಿಂದ ತ್ರಿಪಾಠಿ ವಿರುದ್ಧಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಿನ್ನರ ಅಖಾಡದ ಮಹತ್ವವನ್ನು ಎತ್ತಿಹಿಡಿಯುವ ಯಾವುದೇ ಕೆಲಸವನ್ನು ತ್ರಿಪಾಠಿ ಮಾಡಲಿಲ್ಲ, ಬದಲಿಗೆ ದೇಶದ್ರೋಹ ಆರೋಪದ ಮೇರೆಗೆ ದೇಶ ತೊರೆದಿದ್ದ ಬಾಲಿವುಡ್ ನಟಿಯನ್ನು ಮಹಾಮಂಡಲೇಶ್ವರಿಯನ್ನಾಗಿ ಮಾಡಲಾಗಿದೆ ಎಂದು ತ್ರಿಪಾಠಿ ವಿರುದ್ಧ ರಿಷಿ ಅಜಯ್ ದಾಸ್ ವಾಗ್ದಾಳಿ ನಡೆಸಿದ್ದಾರೆ.
ಈ ಹೇಳಿಕೆ ಕುರಿತು ಪ್ರತ್ರಿಕ್ರಿಯಿಸಿರುವ ತ್ರಿಪಾಠಿ, ಅಜಯ್ ದಾಸ್ ಅಖಾಡದ ಸದಸ್ಯರೂ ಕೂಡಾ ಆಗಿಲ್ಲ. ಅಖಾಡ ನನ್ನಿಂದ ನೋಂದಣಿಯಾಗಿದೆ. ಅವರು ನೀಡಿರುವ ಪತ್ರವ ಕಸದ ತೊಟ್ಟಿಗೆ ಸಮಾನವಾಗಿದೆ. ಕಿನ್ನರ ಅಖಾಡದ ಪರವಾಗಿ ಪತ್ರ ನೀಡಲು ದಾಸ್ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ತ್ರಿಪಾಠಿ ಹೇಳಿದ್ದಾರೆ.