ಮಂದರಗಿರಿಯು 2ನೇ ಶ್ರವಣಬೆಳಗೊಳವಾಗಲಿ :ವೀರೇಶಾನಂದ ಶ್ರೀ ಆಶಯ

ತುಮಕೂರು

     ಭಗವಾನ್ ಮಹಾವೀರ ತೀರ್ಥಂಕರರ ಮೋಕ್ಷ ಪ್ರಾಪ್ತಿಯಾದ ಸಮವಸರಣದ ಪ್ರತಿಕೃತಿಯನ್ನೊಳಗೊಂಡ ಮಂದರಗಿರಿ ಬಸದಿಬೆಟ್ಟ ಶತಮಾನಗಳ ಇತಿಹಾಸದೊಂದಿಗೆ ಜೈನಧರ್ಮೀಯರ ಪವಿತ್ರ ಕ್ಷೇತ್ರವೆನಿಸಿದ್ದು, ಭಕ್ತರ ಪಾಲಿಗೆ 2ನೇ ಶ್ರವಣಬೆಳಗೊಳ, 2ನೇ ಧರ್ಮಸ್ಥಳವಾಗಿ ಬೆಳೆಯಲಿ ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ ಆಶಿಸಿದರು.

     ಮಂದರಗಿರಿಯಲ್ಲಿ ನಡೆಯುತ್ತಿರುವ ಶ್ರೀ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಶನಿವಾರ ನಡೆದ ಸಭಾ ಕಾರ್ಯ್ರಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಕ್ರೌರ್ಯದ ಸಮಾಜಕ್ಕೆ ಶಾಂತಿ ಸಂದೇಶವನ್ನು ನೀಡಿದ್ದೆ ಜೈನ ಸಮುದಾಯ. ಧಾರ್ಮಿಕವಾಗಿ ಜೈನ ಸಮಾಜ ಇಂದಿಗೂ ಕೂಡ ಎಚ್ಚರಿಕೆ ತಪ್ಪಿಲ್ಲ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜೈನ ಸಾಹಿತಿಗಳ ಕೊಡುಗೆ ಅಪಾರವಾದುದು. ಜಗತ್ತಿಗೆ ತ್ಯಾಗ ವೈರಾಗ್ಯವನ್ನು ಪರಿಚಯಿಸಿದವರು ಜೈನರಾಗಿದ್ದಾರೆ. 24 ತೀರ್ಥಂಕರರ ಮಹಾತ್ಮರು ಸಾರಿದ ಧಾರ್ಮಿಕ ಮೌಲ್ಯಗಳು ಸೂರ್ಯ ಚಂದ್ರ ಇರುವರೆಗೂ ಕೂಡ ಶಾಶ್ವತವಾಗಿರುತ್ತದೆ ಎಂದರು.

    ಧರ್ಮಪಾಲನೆಯ ಪವಿತ್ರ ಧರ್ಮ: ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿಧರ್ಮದಲ್ಲಿನ ಆಚಾರ ವಿಚಾರಗಳಲ್ಲಿ ಚಾಚೂ ತಪ್ಪದೇ ಪಾಲಿಸಿಕೊಂಡು ಬರುವಂತಹ ಧರ್ಮಗಳಲ್ಲಿ ಜೈನ ಧರ್ಮ ಪ್ರಮುಖವಾಗಿದೆ.. ಭಾರತೀಯ ಪರಂಪರೆಯುಲ್ಲಿ ಜೈನ ಧರ್ಮ ಅತ್ಯಂತ ಪವಿತ್ರವಾಗಿದ್ದು, ಎಲ್ಲರನ್ನೂ ಆತ್ಮೀಯವಾಗಿ ನಡೆಸಿಕೊಳ್ಳುವಂತಹ ಧರ್ಮ ಜೈನ ಧರ್ಮವಾಗಿದೆ. ದಿಗಂಬರ ಜೈನ ಮುನಿಗಳ ಉಪದೇಶವನ್ನು ಕೇಳುವುದೇ ನಮ್ಮ ಧನ್ಯತೆಯಾಗಿದೆ. ವಿಶೇಷವಾಗಿ ತುಮಕೂರಿಗೆ ಬರುವಂತಹ ಎಲ್ಲಾ ಮುನಿಗಳು ಸಿದ್ಧಗಂಗಾ ಮಠಕ್ಕೆ ಭೇಟಿಕೊಡುವುದು ಸೌಭಾಗ್ಯವೆನಿಸಿದೆ ಎಂದರು.

    ಕಾರ್ಯಕ್ರಮದಲ್ಲಿ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಶ್ರೀ ಅಮರ ಕೀರ್ತಿ ಮಹಾರಾಜ್ ಸಾನಿಧ್ಯ ವಹಿಸಿದ್ದರು. ಕನಕಗಿರಿ ಜೈನ ಮಠದ ಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ,  , ಸ್ವಾದಿ ಸೋಂದ ಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ, ಆರತಿಪುರ ಜೈನಮಠದ ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹೈಕೋರ್ಟ್ ನ್ಯಾಯಮೂರ್ತಿ ಪಿ.ಎನ್.ದೇಸಾಯಿ, ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ, ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಆರ್. ಜೆ. ಸುರೇಶ್, ಧರ್ಮ ಸ್ಥಳದ ಡಿ.ಸುರೇಂದ್ರ ಕುಮಾರ್, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ, ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಸಮಿತಿ ಅಧ್ಯಕ್ಷ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ ಪದ್ಮಿನಿ ನಾಗರಾಜ್ ಹಾಜರಿದ್ದರು. ಟಿ.ಡಿ ಬಾಹುಬಲಿ ಬಾಬು ಸ್ವಾಗತಿಸಿದರು. ಪೂಜ್ಯ ಮೋಹನ್ ಪ್ರಾರ್ಥಿಸಿದರು, ಕುಮುದ ನಿರೂಪಿಸಿದರು. ಬಿ.ಕೆ.ಪ್ರದೀಪ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap