ಬೆಂಗಳೂರು:
ಪ್ರಸ್ತುತ ವಿಜಯ್ ಕಾರ್ತಿಕೇಯನ್ ಚೊಚ್ಚಲ ನಿರ್ದೇಶನದ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ, ಮತ್ತು ಅನಿರುದ್ಧ್ ಭಟ್ ಸೇರಿದಂತೆ ಹಲವು ಕಲಾವಿದರ ಬಗ್ಗೆ ಮಾಹಿತಿ ದೊರೆತಿದೆ. ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ನಿರ್ಣಾಯಕ ದೃಶ್ಯಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ, ಆದರೆ ಅವರು ನಟಿಸುತ್ತಿರುವ ಬಗ್ಗೆ ಕೆಲ ದಿನಗಳ ನಂತರ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸುದೀಪ್ ಮತ್ತು ವರಲಕ್ಷ್ಮಿ ಈ ಹಿಂದೆ ಮಾಣಿಕ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು, ಕನ್ನಡದ ಮೊದಲ ಚಿತ್ರದಲ್ಲಿ ವರಲಕ್ಷ್ಮಿ ನಟಿಸಿದ್ದರು. ಮ್ಯಾಕ್ಸ್ ನಲ್ಲಿಸುದೀಪ್ ಜೊತೆ ಎರಡನೇ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಮೂಲಕ ಮ್ಯಾಕ್ಸ್ ನಿರ್ದೇಶಕರು ಕುತೂಹಲ ಕೆರಳಿಸಿದ್ದಾರೆ.
ವಿ ಕ್ರಿಯೇಷನ್ಸ್ ನಿರ್ಮಾಣದ ಮ್ಯಾಕ್ಸ್ ಚಿತ್ರಕ್ಕೆ ಶಿವಕುಮಾರ್ ಕಲಾ ನಿರ್ದೇಶಕರಾಗಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಸುದೀಪ್, ಮ್ಯಾಕ್ಸ್ ಸಿನಿಮಾ ಜೊತೆಗೆ, ಬಿಗ್ ಬಾಸ್ ಸೀಸನ್ 10 ಕನ್ನಡದಲ್ಲಿ ಹೋಸ್ಟ್ ಮಾಡಲು ತಯಾರಿ ನಡೆಸುತ್ತಿದ್ದು, ತಂಡವು ಇತ್ತೀಚೆಗೆ ಪ್ರೋಮೋವನ್ನು ಬಹಿರಂಗಪಡಿಸಿದೆ.
ಇದರ ಹೊರತಾಗಿ, ಬಹುಭಾಷಾ ನಟ ನಿರ್ದೇಶಕ ಚೇರನ್ ಅವರೊಂದಿಗೆ, ನಿರ್ದೇಶಕ ಅನುಪ್ ಭಂಡಾರಿ ಅವರೊಂದಿಗೆ ಬಿಲ್ಲಾ ರಂಗ ಬಾಷಾ ಸಿನಿಮಾ ಸಹ ಮಾಡುತ್ತಿದ್ದಾರೆ, ಇದರ ಜೊತೆಗೆ KRG ಸ್ಟುಡಿಯೋಸ್ ನಿರ್ಮಾಣದ ಸಿನಿಮಾಗೆ ಕಿಚ್ಚ ನಿರ್ದೇಶನ ಮಾಡುತ್ತಿದ್ದಾರೆ.