ಅಂಬೇಡ್ಕರ್ ಅವರು ಬದುಕಿದ್ದ ೬೫ ವರ್ಷಗಳ ಕಾಲವು ಶೋಷಿತರ ಏಳಿಗೆಗಾಗಿ ಶ್ರಮಿಸಿದರು : ಮಂಜುಳಶ್ರೀಕಾಂತ್

ನಾಯಕನಹಟ್ಟಿ

   ಇಡೀ ವಿಶ್ವವೇ ಗೌರವ ಕೊಡುವಂತೆ ಸಂವಿಧಾನವನ್ನು ರಚಿಸುವ ಮೂಲಕ ಡಾ|| ಬಿ.ಆರ್. ಅಂಬೇಡ್ಕರ್‌ರವರು ವಿಶ್ವರತ್ನರಾಗಿ ಹೊರಹೊಮ್ಮಿದ್ದಾರೆ ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾಂತ್ ತಿಳಿಸಿದರು.

   ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ೧೩೪ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ಬದುಕಿದ್ದ ೬೫ ವರ್ಷಗಳ ಕಾಲವು ಶೋಷಿತರ ಏಳಿಗೆಗಾಗಿ ಶ್ರಮಿಸಿದರು, ತಾವು ದೇಶಕ್ಕೆ ಸಮರ್ಪಿಸಿದ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆಯನ್ನು ಸಾರುವ ಮೂಲಕ ಇಡೀ ವಿಶ್ವಕ್ಕೆ ನಾಯಕರಾಗಿದ್ದಾರೆ ಎಂದು ಹೇಳಿದರು.

    ಡಾ|| ಬಿ.ಆರ್. ಅಂಬೇಡ್ಕರ್‌ರವರು ತಮ್ಮ ಜೀವಿತ ಕಾಲದಲ್ಲಿ ಪಟ್ಟ ಶ್ರಮಕ್ಕೆ ಇಂದು ಕೋಟ್ಯಾಂತರ ಜನ ಸುಖವಾಗಿ ಬಾಳುತ್ತಿದ್ದಾರೆ. ಡಾ|| ಬಿ.ಆರ್. ಅಂಬೇಡ್ಕರ್‌ರವರಿಂದ ದೇಶದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನವು ಹಾಗೂ ಗೌರವ ದೊರೆತಿದೆ. ಮಹಿಳೆಯರಿಗೆ ಸಮಾನತೆಯನ್ನು ದೊರಕಿಸಿಕೊಡುವಲ್ಲಿ ಅವರ ಪಾತ್ರ ಪ್ರಮುಖ, ಮಹಿಳೆಯರಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸ್ಥಾನಮಾನ ಕೊಡಿಸಲು ಅವರು ನಿರಂತರವಾಗಿ ಹೋರಾಟ ಮಾಡಿದರು. ನಮ್ಮ ಸಂವಿಧಾನ ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ ರವರು ತಮ್ಮ ಛಲ, ಸಾಧನೆ ಮೂಲಕ ಭಾರತ ಕನಸು ಕಾಣುತ್ತಾ ಬೆಳೆದು ನಮ್ಮ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ರೂಪಗೊಂಡರು.

    ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರೂ ಮತ್ತು ೯ನೇ ವಾರ್ಡಿನ ಪ.ಪಂ. ಸದಸ್ಯ ಜೆ.ಆರ್.ರವಿಕುಮಾರ್ ಮಾತನಾಡಿ ಶಿಕ್ಷಣದ ಮಹತ್ವವನ್ನು ಸಾರಿದ ಡಾ|| ಬಿ.ಆರ್.ಅಂಬೇಡ್ಕರ್ ವಿದ್ಯಾವಂತರು ಮಾತ್ರ ಚುನಾವಣೆಯಲ್ಲಿ ಮತ ಹಾಕುವ ಅವಕಾಶವಿತ್ತು ಆ ಸಂದರ್ಭದಲ್ಲಿ ಅಂಬೇಡ್ಕರ್‌ರವರು ದೇಶದ ಪ್ರತಿಯೊಬ್ಬರೂ ಕೂಡ ಮತ ಹಾಕುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಅಂಬೇಡ್ಕರ್‌ರವರು ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಅವರು ದೇಶದ ಆಸ್ತಿ, ಸಂವಿಧಾನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿರುವ ಅವರು ದೇಶದಲ್ಲಿ ಹುಟ್ಟಿದ ಯಾವುದೇ ಪ್ರಜೆಯು ಶಿಕ್ಷಣದಿಂದ ವಂಚಿತರಾಗದಂತೆ ಕಟ್ಟ ಕಡೆಯ ಸಮುದಾಯವೂ ಸಹ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿಕೊಂಡರು. ಯುವಕರು ದುಶ್ಚಟಗಳನ್ನು ಬಿಟ್ಟು ಓದಿನ ಕಡೆ ಹೆಚ್ಚು ಗಮನಹರಿಸಿ ಎಂದು ಮನವಿ ಮಾಡಿಕೊಂಡರು.

    ಡಾ|| ಬಿ.ಆರ್.ಅಂಬೇಡ್ಕರ್‌ರವರು ಭಾರತೀಯ ಸಂವಿಧಾನ ಶಿಲ್ಪಿ ಮಹಾನ್ ಸಮಾಜ ಸುಧಾರಕ ಮತ್ತು ದಲಿತರ ಹಕ್ಕುಗಳ ರಕ್ಷಕ ಅವರು ತಮ್ಮ ಇಡೀ ಜೀವವನ್ನು ಜಾತಿವಾದ, ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುತ್ತ ಕಳೆದರೂ ತಮ್ಮ ಎಲ್ಲಾ ನಾಗರೀಕರಿಗಳಿಗಾಗಿ ಸಮಾಜ ಹಕ್ಕುಗಳನ್ನು ಹೊದಗಿಸಲು ಸಂವಿಧಾನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು.

    ಈ  ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಪ್ರಭು, ಓಬಳೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾಂತ್, ಮಾಜಿ ಗ್ರಾ.ಪಂ. ಸದಸ್ಯ ಆರ್. ಶ್ರೀಕಾಂತ್, ಎನ್.ಮಾರುತಿ, ನಿರಂಜನ್, ಸಮೀವುಲ್ಲಾ, ಡಾ|| ನಾಗರಾಜ್ ಮೀಸೆ, ಹರೀಶ, ರಘು, ಮಹಂತೇಶ್, ನರಸಿಂಹಮೂರ್ತಿ, ಬೋಸಯ್ಯ ಹಾಗೂ ಇನ್ನೂ ಇತರರು ಇದ್ದರು.