ಬಸವಣ್ಣನವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್ ಶರಣರು : ಮಂಜುಳಾ ಶ್ರೀಕಾಂತ್

ನಾಯಕನಹಟ್ಟಿ

    ಬಸವಣ್ಣನವರು ೧೨ನೇ ಶತಮಾನದಲ್ಲಿ ಜಾತಿಭೇದ ಎಂಬ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್ ಶರಣರು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.

    ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ೮೯೨ನೇ ಬಸವಜಯಂತಿಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ನಂತರ ಮಾತನಾಡಿದ ಅವರು ಈ ಕಾಯಕ ಶರಣರಾಗಿದ್ದಾರೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ವಚನಗಳ ಮೂಲಕ ಕಾಯಕತತ್ವ, ದಾಸೋಹ, ಸಮಾನತೆ, ಮೂಡನಂಬಿಕೆ ವಿರೋಧ ಹೋರಾಟಗಳ ಮೂಲಕ ತತ್ವಗಳನ್ನು ಜಗತ್ತಿಗೆ ಸಾರಿದರು. ಕಾಯಕವೇ ಕೈಲಾಸದ ತತ್ವದ ಅಡಿ ಎಲ್ಲರೂ ಸಮಾನರು ಯಾವುದೇ ಕೆಲಸದಲ್ಲಿ ಮೇಲು ಕೀಳಿಲ್ಲ ಎಂದು ಸಾರಿದವರು ಬಸವಣ್ಣನವರು.

   ಪಟ್ಟಣ ಪಂಚಾಯಿತಿ ಸದಸ್ಯೆ ವಿನುತ ಮಾತನಾಡಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಮಾಡುವ ಜೊತೆಗೆ  ಸಮಾನತೆಗೆ ಬದ್ರಬುನಾಧಿಯನ್ನು ೧೨ನೇ ಶತಮಾನದಲ್ಲಿಯೇ ಹಾಕಿದ್ದರು ಎಂದು ಸ್ಮರಿಸಿದ್ದರು. ಕುಲ, ಕುಲವೆಂದು ನಾವೆಲ್ಲರೂ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಪಾಲಿಸೋಣ, ಕುಲ,ಕುಲವೆಂದು ಹೊಡೆದಾಡುವ ಮನುಷ್ಯರೆಲ್ಲರೂ ಎಲ್ಲಾ ಒಂದೇ ಎಂದು ಅವರು ಹೇಳಿದ್ದರು.

   ಈ ಸಂದರ್ಭದಲ್ಲಿ ಉಪಸ್ಥಿತರಾದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ತಿಪ್ಪೇಸ್ವಾಮಿ, ಸುನಿತಮುದಿಯಪ್ಪ, ಗುರುಶಾಂತಮ್ಮ, ವಿನುತ, ಜಾಗನೂರಹಟ್ಟಿ ಮಂಜುನಾಥ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಮಾಜಿ ಗ್ರಾ.ಪಂ.ಸದಸ್ಯ ಆರ್.ಶ್ರೀಕಾಂತ್, ಪಟ್ಟಣ ಪಂಚಾಯಿತಿಯ ನೌಕರರು, ಪೌರಕಾರ್ಮಿಕರು, ಹಾಗೂ ಇನ್ನಿತರರು ಇದ್ದರು.

Recent Articles

spot_img

Related Stories

Share via
Copy link