ಕೀವ್:
ಉಕ್ರೇನ್ ರಾಜಧಾನಿ ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾದಲ್ಲಿ ಕೊಲ್ಲಲ್ಪಟ್ಟ 410 ನಾಗರಿಕರ ದೇಹಗಳನ್ನು ವಿಧಿವಿಜ್ಞಾನ ತಜ್ಞರು ಪರೀಕ್ಷೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನ್ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.
ಫೋರೆನ್ಸಿಕ್ ಬ್ಯೂರೋದ ತಜ್ಞರು ಡಿಎನ್‌ಎ ಪರೀಕ್ಷೆ, ಶವಪರೀಕ್ಷೆ ಮತ್ತು ದೇಹಗಳ ಮಾದರಿಗಳ ಪರೀಕ್ಷೆ ನಡೆಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ 1-3 ರ ನಡುವೆ ಪತ್ತೆಯಾದ 410 ಶವಗಳ ಪೈಕಿ 140 ದೇಹಗಳನ್ನು ಈಗಾಗಲೇ ಪ್ರಾಸಿಕ್ಯೂಟರ್ ಗಳು ಮತ್ತು ಇತರ ತಜ್ಞರು ಪರೀಕ್ಷಿಸಿದ್ದಾರೆ ಎಂದು ಅವರು ಹೇಳಿದರು. ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯಾದ ಒಕ್ಕೂಟವು ನಡೆಸಿದ ಕ್ರೂರ ಯುದ್ಧ ಅಪರಾಧಗಳ ನಿರ್ಣಾಯಕ ಪುರಾವೆ ಇದಾಗಿದೆ ಎಂದು ಹೇಳಲಾಗಿದೆ.
ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಎಂಟ್ರಿಕೊಡಲಿದೆ ಪವರ್ ಫುಲ್ ‘ಜೇಮ್ಸ್’
ಬುಚಾ ನಗರ ಏಪ್ರಿಲ್ 2 ರಂದು ರಷ್ಯಾದ ಪಡೆಗಳಿಂದ ವಿಮೋಚನೆಗೊಂಡಿತು. ಆ ನಂತರ, ಸುಮಾರು 300 ಜನರನ್ನು ಸಮಾಧಿ ಮಾಡಿದ ಸ್ಥಳ ಕಂಡುಹಿಡಿಯಲಾಗಿದೆ ಎಂದು ಬುಚಾ ಮೇಯರ್ ಅನಾಟೊಲಿ ಫೆಡೋರುಕ್ ಹೇಳಿದ್ದಾರೆ.
ನಗರದ ಬೀದಿಗಳಲ್ಲಿ ಮಹಿಳೆಯರ ಬೆತ್ತಲೆ ದೇಹಗಳು ಸಹ ಕಂಡುಬಂದಿವೆ. ಬೀದಿಗಳಲ್ಲಿ ಹತ್ತಾರು ಶವಗಳು ಬಿದ್ದಿವೆ, ಅವುಗಳಲ್ಲಿ ಕೆಲವು ದೇಹಗಳ ಕೈಗಳನ್ನು ಕಟ್ಟಲಾಗಿದೆ ಎಂದು ಅವರು ಹೇಳಿದರು,ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹತ್ಯೆಗಳನ್ನು ಜನಾಂಗೀಯ ಹತ್ಯೆ ಎಂದು ಕರೆದಿದ್ದಾರೆ ಎಂದು ಉಕ್ರೇಯಿನ್ಸ್ಕಾ ಪ್ರಾವ್ಡಾ ವರದಿ ಮಾಡಿದೆ.
ಆದರೆ, ಹತ್ಯೆಗೂ ತನ್ನ ಪಡೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಈ ಕುರಿತಾದ ಆರೋಪವನ್ನು ರಷ್ಯಾ ತಳ್ಳಿಹಾಕಿದೆ. ಬುಚಾ ರಷ್ಯಾದ ಸಶಸ್ತ್ರ ಪಡೆಗಳ ನಿಯಂತ್ರಣದಲ್ಲಿದ್ದಾಗ, ಯಾವುದೇ ಸ್ಥಳೀಯ ನಿವಾಸಿಗಳು ಯಾವುದೇ ಹಿಂಸಾಚಾರದಿಂದ ತೊಂದರೆಗೊಳಲಾಗಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಬುಚಾದಲ್ಲಿ ಹತ್ಯಾಕಾಂಡದ ಕುರಿತು ಉಕ್ರೇನ್ ಸರ್ಕಾರ ಪ್ರಕಟಿಸಿದ ಫೋಟೋಗಳು ಮತ್ತು ವಿಡಿಯೊಗಳು ನಕಲಿ ಎಂದು ರಷ್ಯಾ ಸಚಿವಾಲಯವು ಹೇಳಿಕೊಂಡಿದೆ.
ಬುಚಾದಲ್ಲಿನ ಮಾರಣಹೋಮದ ಬಗ್ಗೆ ವ್ಯಾಪಕ ಖಂಡನೆ:
ಬುಚಾದಲ್ಲಿನ ಮಾರಣಹೋಮದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಹೇಯ ದಾಳಿ ಎಂದು ಆರೋಪಿಸಿದರೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹತ್ಯೆಗಳನ್ನು ಕಟುವಾದ ಮಾತುಗಳಿಂದ ತೀವ್ರವಾಗಿ ಖಂಡಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್ಕೆ ಸಜ್ಜು?
ಈ ಬಗ್ಗೆ ಸ್ವತಂತ್ರ ತನಿಖೆ ತುರ್ತಾಗಿ ಅಗತ್ಯವಿದೆ ಎಂದು ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಇದನ್ನು ಭಯಾನಕ ಯುದ್ಧ ಅಪರಾಧ ಎಂದು ಖಂಡಿಸಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇದು ಅಸಹನೀಯ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ