ನವದೆಹಲಿ:
2024 ರ ಚುನಾವಣೆಯಲ್ಲಿ ಭಾರತದ ಅಂದಿನ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂಬ ಮಾರ್ಕ್ ಝುಕರ್ಬರ್ಗ್ ಹೇಳಿಕೆಗೆ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗುತ್ತಿದ್ದಂತೆಯೇ Meta ಕ್ಷಮೆ ಕೋರಿದೆ.
ಝುಕರ್ಬರ್ಗ್ ಹೇಳಿಕೆಯನ್ನು ಅಪ್ರಜ್ಞಾಪೂರ್ವಕ ದೋಷ ಎಂದು ಮೆಟಾ ಸಂಸ್ಥೆ ಹೇಳಿದೆ. ಝುಕರ್ಬರ್ಗ್ ಹೇಳಿಕೆಗೆ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನುದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವಂತ್ ತುಕ್ರಾಲ್ “ಅಧಿಕಾರದಲ್ಲಿದ್ದ ಹಲವು ಪಕ್ಷಗಳು 2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂಬ ಮಾರ್ಕ್ ಝುಕರ್ಬರ್ಗ್ ಅವರ ಹೇಳಿಕೆ ಹಲವು ರಾಷ್ಟ್ರಗಳಿಗೆ ಹೊಂದಾಣಿಕೆಯಾಗುತ್ತದೆ. ಆದರೆ ಭಾರತಕ್ಕೆ ಅಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
