ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ….!

ಬೆಂಗಳೂರು

    ನಮ್ಮ ಮೆಟ್ರೋ  ವೇಗದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುಕೂಲಕಾರಿಯಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್​ ಮುಕ್ತ ಸಂಚಾರ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿ  ​​ಸ್ಮಾರ್ಟ್​ ಡಿಜಿಟಲ್​ ಲಗೇಜ್​ ಲಾಕರ್​ ಅನ್ನು ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್​ ಡಿಜಿಟಲ್​ ​ಲಾಕರ್​ನಲ್ಲಿ ತಮ್ಮ ಲಗೇಜ್​ ಇಟ್ಟು ಬೇರಡೆ ಹೋಗಬೇಕಿದ್ದ ಸ್ಥಳಕ್ಕೆ ತೆರಳಿ ವಾಪಸ್​ ಬರಬಹುದು. ಸ್ಮಾರ್ಟ್​ ಡಿಜಿಟಲ್​ ಲಗೇಜ್​ ಲಾಕರ್ ಕಾರ್ಯ, ಇದನ್ನು ಉಯೋಗಿಸುವುದು ಹೇಗೆ? ಲಗೇಜ್​ ಇಡಲು ಎಷ್ಟು ಹಣ ನೀಡಬೇಕು ಎಂಬ ಮಾಹಿತಿ ಇಲ್ಲಿದೆ.

    ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​)ನಲ್ಲಿ ಬುಧವಾರ ಸ್ಮಾರ್ಟ್​ ಡಿಜಿಟಲ್​ ಲಾಕರ್​ ಆರಂಭಗೊಂಡಿದೆ. ಮೆಜೆಸ್ಟಿಕ್​ ನಿಲ್ದಾಣದ ‘ಡಿ’ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್​ ಡಿಜಿಟಲ್​ ಲಾಕರ್​ಗೆ ಬಿಎಂಆರ್​ಸಿಎಲ್​ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು. ಪ್ರಯಾಣಿಕರು 2 ರಿಂದ 5 ಬ್ಯಾಗ್‌ಗಳನ್ನು ಸ್ಮಾರ್ಟ್ ಡಿಜಿಟಲ್‌ ಲಾಕರ್‌ನಲ್ಲಿ ಇಡಬಹುದಾಗಿದೆ. 

   ಸ್ಮಾರ್ಟ್ ಡಿಜಿಟಲ್ ಲಾಕರ್‌ನಲ್ಲಿನ ಕಿಯೋಸ್ಟ್‌ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ಕಿಯೋಸ್ಟ್‌ನಲ್ಲಿ ಹಾಕಿದರೆ ಬ್ಯಾಗ್‌ಗಳನ್ನು ಇಡಲು ಲಾಕ‌ರ್ ದೊರೆಯಲಿದೆ. ನಂತರ, ಲಾಕರ್​ನಲ್ಲಿ ಬ್ಯಾಗ್​ ಇಟ್ಟು ಲಾಕ್​ ಮಾಡಬೇಕು. ಅನಂತರ ತೆರೆಯಬೇಕಿದ್ದರೆ ಬ್ಯಾಗ್​ ಮಾಲೀಕರೇ ಬಂದು ಒಟಿಪಿ ಹಾಕಬೇಕು. ಆಗ ಲಾಕರ್​ ತೆರೆಯುತ್ತದೆ. ಹೀಗಾಗಿ, ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. 

   2 ರಿಂದ 3 ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಇಡಲು 70 ರೂ. ಹಾಗೂ 4 ರಿಂದ 5 ಬ್ಯಾಗ್‌ಗಳನ್ನು ಇಡಲು 100 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ 12 ಗಂಟೆಗಳ ಕಾಲ ಬ್ಯಾಗ್‌ಗಳನ್ನು ಇಟ್ಟರೆ ಕ್ರಮವಾಗಿ 120 ಮತ್ತು 160 ರೂ. ಶುಲ್ಕ ನಿಗದಿ ಮಾಡಲಾಗಿದೆ .ನೂತನ ಸೇವೆಯು ಸದ್ಯ ಮೆಜೆಸ್ಟಿಕ್ ಕೆಂಪೇಗೌಡ, ಚಿಕ್ಕಪೇಟೆ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಇತರ ನಿಲ್ದಾಣಗಳಿಗೂ ವಿಸ್ತರಿಸಲು ಸೇಫ್ ಕ್ಲಾಕ್ ಸಂಸ್ಥೆ ಯೋಜಿಸಿದೆ.

Recent Articles

spot_img

Related Stories

Share via
Copy link