ಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಮತದಾರರಿಗೆ ಅನುಕೂಲ ಮಾಡಿಕೊಡಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ರೈಲು ಸೇವೆಗಳನ್ನು ಮಧ್ಯರಾತ್ರಿವರೆಗೂ ಒದಗಿಸಲು ತೀರ್ಮಾನಿಸಿದೆ.
ಕೊನೆಯ ರೈಲು ಬೈಯಪ್ಪನಹಳ್ಳಿಯಿಂದ ಕೆಂಗೇರಿ, ನಾಗಸಂದ್ರ, ಸಿಲ್ಕ್ ಇನ್ಸಿಟ್ಯೂಟ್, ಕೆ.ಆರ್. ಪುರ ಮತ್ತು ವೈಟ್‌ಫೀಲ್ಡ್ ನಡುವೆ ಮಧ್ಯರಾತ್ರಿ 12 ಗಂಟೆ 5 ನಿಮಿಷಕ್ಕೆ ಹೊರಡಲಿದೆ. ಇನ್ನೊಂದು ಮಾರ್ಗದಲ್ಲಿ ಕೊನೆಯ ರೈಲು 12 ಗಂಟೆ 35 ನಿಮಿಷಕ್ಕೆ ಹೊರಡಲಿದೆ.
ಈ ನಡುವೆ ಕೆ.ಎಸ್.ಆರ್.ಟಿ.ಸಿ. ಮತ್ತು ಬಿಎಂಟಿಸಿಯ ಬಹುತೇಕ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಮತ್ತು ನಾಳಿನ ಮತದಾನದ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಸೇವೆಗಳು ವಿರಳವಾಗಿರುತ್ತದೆ ಎಂದು ಈ ಎರಡೂ ನಿಗಮಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
