ಮಿಡಿಗೇಶಿ :
ಮಧುಗಿರಿ-ಪಾವಗಡ ಹೆದ್ದಾರಿಯ ಚಂದ್ರಬಾವಿ-ಕ್ಯಾತಗೊಂಡನಹಳ್ಳಿ ಮಧ್ಯದಲ್ಲಿ ಏ.13 ಯುಗಾದಿ ಹಬ್ಬದ ದಿನ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಅಸು ನೀಗಿದ್ದಾನೆ.
ಚಂದ್ರಬಾವಿ ಗ್ರಾಮದ ಬಳಿಯ ಶಿವ ಗ್ರಾನೈಟ್ ಕಂಪನಿಯ ಉದ್ಯೋಗಿ ಮಹಾರಾಷ್ಟ್ರ ಮೂಲದ ಪವನ್ (25) ಎಂಬಾತನೆ ಮೃತಪಟ್ಟಿರುವ ದುರ್ದೈವಿ.
ಮಿಡಿಗೇಶಿಯಿಂದ ತನ್ನ ದ್ವಿಚಕ್ರವಾಹನದಲ್ಲಿ (ಕೆ.ಎ.06-ಯು-1178) ಚಂದ್ರಬಾವಿಗೆ ಹೋಗುವಾಗ ಎದುರುಗಡೆಯಿಂದ ಬಂದ ಶ್ರೀನಿವಾಸ ಹೆಸರಿನ ಖಾಸಗಿ ಬಸ್ (ಕೆ.ಎ.16ಸಿ 1099) ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪವನ್ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ.
ಪಿಎಸ್‍ಐ ಹನುಮಂತರಾಯಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಸಿಪಿಐ ಸರ್ದಾರ್, ಡಿವೈಎಸ್‍ಪಿ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ