ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ (ಇಟಕದಿಬ್ಬನಹಳ್ಳಿ) ಹೋಬಳಿಗೆ ಸೇರಿದ ಜನಕಲೋಟಿ ಗ್ರಾಮದ ವ್ಯಾಪ್ತಿಯ ಹರಿಯಾಣ ಮೂಲದವರಿಗೆ ಸೇರಿದ ಫಾರಂನಲ್ಲಿ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಕಳ್ಳತನ ಮಾಡಲು ವಿಫಲಯತ್ನ ನಡೆಸಿದ ಘಟನೆ ನಡೆದಿದೆ.
ಜ.13ರಂದು ನಾಲ್ವರು ಆರೋಪಿಗಳು ಐದು ಗಂಧದ ಮರಗಳನ್ನು ಬುಡಸಮೇತ ಕಿತ್ತುಹಾಕಿದ್ದು, 15 ಮರಗಳನ್ನು ಅರ್ಧಂಬರ್ಧ ಕೊಯ್ದು ಹಾಕಿದ್ದರು. ಗಂಧದ ಮರಗಳ ತುಂಡುಗಳ ಸಿಪ್ಪೆಯನ್ನು ಬೇರ್ಪಡಿಸಿದ್ದು ಪಕ್ಕದ ಜಮೀನಿನ ರೂಮ್ ವೊಂದರ ಬಳಿ ಸ್ವಲ್ಪ ತುಂಡುಗಳನ್ನು ಇರಿಸಿದ್ದರು. ಈ ವೇಳೆ ತೋಟದ ಕಾವಲುಗಾರ ಬಿಜೈ ಎಂಬಾತ ಗಮನಿಸಿ ಕೂಗಿಕೊಂಡ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಸಮೇತ ಬಂದಿದ್ದ ನಾಲ್ವರು ಕಳ್ಳರು ಪರಾರಿಯಾಗಿದ್ದಾರೆ.
ಈ ಸಂಬಂಧ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
