ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಕೊಂಡವಾಡಿ ಗ್ರಾಮದ ಕ್ರಾಸ್ ಬಳಿ ಆ.4 ರಂದು ಬೆಳಗ್ಗೆ 9-30 ಕ್ಕೆ ಇಮ್ಮಡಗೊಂಡನಹಳ್ಳಿ ಗ್ರಾಮದ ಶಿಕ್ಷಕ ದಯಾನಂದ(32) ಕೊಂಡವಾಡಿ ಗ್ರಾಮದ ಶಾಲೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ಹೋಗುತ್ತಿರುವಾಗ ಎದುರು ಕಡೆಯಿಂದ ಬಂದ ದ್ವಿಚಕ್ರವಾಹನ ಮತ್ತು ಶಿಕ್ಷಕರಿಗೆ ಸೇರಿದ ದ್ವಿಚಕ್ರವಾಹನಗಳೆರಡು ಮುಖಾಮುಖಿ ಡಿಕ್ಕಿ ಒಡೆದಿವೆ. ಪರಿಣಾಮ ನರಸಿಹಮೂರ್ತಿ(32) ಎನ್ನುವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿರುತ್ತಾರೆ.
ಶಿಕ್ಷಕ ದಯಾನಂದರನ್ನು 108 ಆ್ಯಂಬ್ಯುಲೆನ್ಸ್‍ನಲ್ಲಿ ಕೊರಟಗೆರೆ ತಾಲ್ಲೂಕು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸು ನೀಗಿರುವುದಾಗಿ ವರದಿಯಾಗಿದೆ. ಸದರಿ ಅಪಘಾತದ ಬಗ್ಗೆ ಮೃತರ ಸಂಬಂಧಿಕರು ದೂರು ನೀಡಿದ್ದು, ಕೊಡಿಗೇನಹಳ್ಳಿ ಪೋಲೀಸ್ ಠಾಣಾಧಿಕಾರಿ ನಾಗರಾಜು ಜೆ.ಆರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಧುಗಿರಿ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕ ರಾಮಕೃಷ್ಣಯ್ಯ ಹಾಗೂ ಸಿ.ಪಿ.ಐ. ಎಂ.ಎಸ್ ಸರ್ದಾರ್ ಸಹ ಭೇಟಿ ನೀಡಿದ್ದು ತನಿಖೆ ಚುರುಕುಗೊಳಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ