ನವದೆಹಲಿ:
140 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸಲು ಸರ್ಕಾರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಮಾಣ ವಚನದಲ್ಲಿ ಭಾಗವಹಿಸಿದ ಎಲ್ಲಾ ವಿದೇಶಿ ಗಣ್ಯರಿಗೆ ಆಭಾರಿಯಾಗಿದ್ದೇನೆ. ಮಾನವ ಪ್ರಗತಿಯ ಅನ್ವೇಷಣೆಯಲ್ಲಿ ಭಾರತ ಯಾವಾಗಲೂ ಮೌಲ್ಯಯುತ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ.
“ಈ ಸಚಿವರ ತಂಡವು ಯುವ ಮತ್ತು ಅನುಭವಿಗಳ ಉತ್ತಮ ಮಿಶ್ರಣವಾಗಿದೆ. ಜನರ ಜೀವನವನ್ನು ಸುಧಾರಿಸುವಲ್ಲಿ ಒತ್ತು ನೀಡಲಾಗುವುದು, 140 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ. ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಚಿವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಸೇರಿದಂತೆ ಮೋದಿ ಸಚಿವಾಲಯದ ಬಲವು 81 ರ ಮಿತಿಗೆ ಪ್ರತಿಯಾಗಿ 72 ರಷ್ಟಿದೆ. ಮೋದಿ ಸಂಪುಟದ ಮೊದಲ ಸಭೆ ಸೋಮವಾರ ಸಂಜೆ ಪ್ರಧಾನಿ ಅವರ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.