ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಇಂದು ಮೋದಿ ಭೇಟಿ…!

ನವದೆಹಲಿ:

    1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ. ಕಾರ್ಗಿಲ್, ಲಡಾಖ್‌ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳಿಂದ ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ. ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ, ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನ.

    ಅದು ಜುಲೈ 14, 1999 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಕಾರ್ಗಿಲ್ ಗಡಿ ನಿಯಂತ್ರಣ ರೇಖೆಯ (LC) ಭಾರತದ ಭಾಗದಲ್ಲಿ ಪಾಕಿಸ್ತಾನ ಸೇನೆ ಬೆಂಬಲಿತ ಶಸ್ತ್ರಸಜ್ಜಿತ ಭಯೋತ್ಪಾದಕರ ಅಪ್ರಚೋದಿತ ಒಳನುಗ್ಗುವಿಕೆಯಿಂದಾಗಿ ‘ಆಪರೇಷನ್ ವಿಜಯ್’ ಆರಂಭವಾಗಿತ್ತು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ 527 ಸೈನಿಕರು ಹುತಾತ್ಮರಾದ ಕಾರಣ ಭಾರತವು ಈ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅವರ ಬಲಿದಾನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

   ಇಂದು ಕಾರ್ಗಿಲ್ ವಿಜಯದ 25 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ, ಭಾರತೀಯ ವಾಯುಪಡೆಯು ಮೊನ್ನೆ ಜುಲೈ 12 ರಿಂದ ಇಂದಿನವರೆಗೆ ಏರ್ ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ‘ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ’ ಸ್ಮರಣಾರ್ಥವನ್ನು ಆಚರಿಸುತ್ತಿದೆ.

Recent Articles

spot_img

Related Stories

Share via
Copy link
Powered by Social Snap