ನೂತನ ಮೆಟ್ರೋ ಮಾರ್ಗ ಉದ್ಗಾಟಿಸಿದ ಮೋದಿ…!

ಬೆಂಗಳೂರು: 

     ಇಂದು ಬೆಂಗಳೂರಿಗೆ ಆಗಮಿಸಿದ ಮೋದಿ ಮೆಟ್ರೋ ಉದ್ಗಾಟಿಸುವ ಮುನ್ನ ವಿಶ್ವೇಶ್ವರಯ್ಯಾ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ನಂತರ ವೈಟ್‌ ಫೀಲ್ಡ್‌ ಬಳಿಯ ಹೆಲಿಪ್ಯಾಡ್‌ ಗೆ ಬಂದಿಳಿದ ಮೋದಿ ರಸ್ತೆ ಮಾರ್ಗವಾಗಿ ಬರುವಾಗ ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರದಂತೆ ನರೆದಿದ್ದರು ಮತ್ತು ಮೋದಿ ಮೋದಿ ಎಂಬ ಕೂಗು ಸಾಮಾನ್ಯವಾಗಿತ್ತು   ಬಿ ಎಂ ಆರ್‌ ಸಿ ಎಲ್‌ ನಿಂದ ನೂತನವಾಗಿ ನಿರ್ಮಾಣವಾಗಿರುವ  ವೈಟ್‌ಫೀಲ್ಡ್ ಮೆಟ್ರೋ ಸ್ಟೇಷನ್‌ ತಲುಪಿದ್ದಾರೆ ಕಾಡುಗೋಡಿಯಿಂದ ಕೆಆರ್ ಪುರಂ ನವರೆಗಿನ 13.71 ಕಿಮೀ ಪೂರ್ವ ವಿಸ್ತರಣೆ ಮಾರ್ಗವನ್ನು 12 ಹೊಚ್ಚ ಹೊಸ ನಿಲ್ದಾಣಗಳನ್ನು ಹೊಂದಿರುವ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಔಪಚಾರಿಕವಾಗಿ ಉದ್ಘಾಟಿಸಿದ್ದಾರೆ.

   ಇದು ಬೆಂಗಳೂರಿನ ಮೆಟ್ರೋ ನೆಟ್‌ವರ್ಕ್ ನ್ನು 69.66 ಕಿಮೀ ಮತ್ತು 63 ನಿಲ್ದಾಣಗಳಿಗೆ ಕೊಂಡೊಯ್ಯುತ್ತದೆ, ಇದು ದೆಹಲಿ ಮೆಟ್ರೋ ನಂತರ ಎರಡನೇ ದೊಡ್ಡ ಮೆಟ್ರೊ ಸಂಪರ್ಕ ಜಾಲವಾಗಿದೆ. 

    ಪ್ರಧಾನಮಂತ್ರಿಯವರು ಇಂದು ಮಧ್ಯಾಹ್ನ ಸುಮಾರು 12.55 ಕ್ಕೆ ಉದ್ಘಾಟಿಸುವ ಸಾಧ್ಯತೆಯಿದ್ದು, ವೈಟ್ ಫೀಲ್ಡ್ ನ ಶ್ರೀ ಸತ್ಯ ಸಾಯಿ ಆಸ್ಪತ್ರೆ ನಿಲ್ದಾಣಕ್ಕೆ ಸುಮಾರು 4 ಕಿಮೀ ದೂರದಲ್ಲಿರುವ ಮತ್ತು ನಡುವೆ ಎಲ್ಲಿಯೂ ಇಳಿಯದೆ ಅದೇ ರೈಲಿನಲ್ಲಿ ಹಿಂತಿರುಗುತ್ತಾರೆ.

     ಲೋಕೋ ಪೈಲಟ್ ಪ್ರಿಯಾಂಕಾ ಅವರು ಪ್ರಧಾನಿಯವರು ಪ್ರಯಾಣಿಸುವ ರೈಲನ್ನು ಚಲಾಯಿಸಲಿದ್ದಾರೆ.  ಹಿಂದಿರುಗುವ ವೇಳೆ ಅದೇ ಹೆಸರಿನ ಲೋಕೋ ಪೈಲಟ್ ಪ್ರಿಯಾಂಕಾ ಬಳ್ಳಾರಿ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap