ಭ್ರಷ್ಟಾಚಾರದ ಕಿಂಗ್ ಮೋದಿ : ಉದಯನಿಧಿ ಸ್ಟಾಲಿನ್‌

ಚೆನ್ನೈ

         ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾಗಿ ಹೋಲಿಕೆ ಮಾಡಿ ಅದನ್ನು ನಿರ್ಮೂಲನೆ ಮಾಡಬೇಕು ಎಂದೆಲ್ಲ ಮಾತನಾಡಿದ್ದ ತಮಿಳನಾಡು ಡಿಎಂಕೆ ಪಕ್ಷದ ನಾಯಕ ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಪ್ರಧಾನಮಂತ್ರಿಗಳ ವಿರುದ್ಧ ಕಟುವಾಟಿಕ ಟೀಕಿಸಿದ್ದಾರೆ.ಪ್ರಧಾನಿ ಮೋದಿಯನ್ನು ”ಭ್ರಷ್ಟಾಚಾರದ ಕಿಂಗ್ ಮೋದಿ” ಎಂದು ಅವರು ಆರೋಪ ಮಾಡಿದ್ದಾರೆ.

    ವಿವಿಧ ವಿಷಯಗಳಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಡಿಎಂಕೆ ಯುವ ಘಟಕದ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾಗಿ ಟೀಕಿಸಿ ಟ್ವೀಟ್ ಮಾಡಿದ್ದರು.

     ಉದಯನಿಧಿ ಸ್ಟಾಲಿನ್ ಅವರು ಭ್ರಷ್ಟಾಚಾರ ಕುರಿತ ಸಿಎಜಿ ವರದಿಯನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ‘ಭ್ರಷ್ಟಾಚಾರ ವಿರೋಧಿ ಬ್ಯಾನರ್ ಅಡಿಯಲ್ಲಿ ಅಧಿಕಾರಕ್ಕೆ ಬಂದ ಫ್ಯಾಸಿಸ್ಟ್‌ಗಳು ಮೊದಲು ನೋಟು ಅಮಾನ್ಯೀಕರಣವನ್ನು ಪ್ರಾರಂಭಿಸಿದರು. ನಂತರ ರಫೇಲ್ ಹಗರಣವನ್ನು ಪ್ರಾರಂಭಿಸಿದರು. ಇದೀಗ ರಾಷ್ಟ್ರೀಯ ಹೆದ್ದಾರಿ, ಆಯುಷ್ಮಾನ್ ಭಾರತ್ ಮತ್ತು ಟೋಲ್‌ಗೇಟ್ ಯೋಜನೆಗಳಲ್ಲಿ ಅವರು ನಡೆಸಿರುವ ಭ್ರಷ್ಟಾಚಾರ ಸಿಎಜಿ ವರದಿಯಿಂದ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯದ ವಿರುದ್ಧ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದರು. 900 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಸತ್ ಭವನಕ್ಕೆ ಮಳೆನೀರು ನುಗ್ಗುತ್ತಿದೆ. 2,700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಿ20 ಸಭಾಂಗಣ ಮುಳುಗಡೆಯಾಗಿದೆ. ಈ ಕಾರಣದಿಂದ ಹೊಸ ಸಂಸತ್ತಿನ ಕಟ್ಟಡ ಮತ್ತು ಜಿ -20 ಸಭಾಂಗಣವನ್ನು ‘ಕೆಳಮಟ್ಟದ’ ನಿರ್ಮಾಣ ಕಾಮಗಾರಿ ಎಂದು ಅವರು ಕರೆದರು.

     ಭಾಷಾ ಗಲಾಟೆ ಹಾಗೂ ಧರ್ಮವನ್ನು ಬಳಸಿಕೊಂಡು ಭ್ರಷ್ಟಾಚಾರವನ್ನು ಬಿಜೆಪಿ ಮರೆಮಾಚುತ್ತಿದೆ ಎಂದು ಉದಯನಿಧಿ ಗಂಭೀರ ಆರೋಪ ಮಾಡಿದರು. ಕೇಂದ್ರ ಬಿಜೆಪಿ ಪಕ್ಷವು ತನ್ನ ಆಡಳಿತದ ಉದ್ದಕ್ಕೂ ಪ್ರತಿ ಅಂಶಗಳಲ್ಲಿ ಈ ಭಾಷಾ ಗಲಾಟೆ, ಧಾರ್ಮಿಕ ಸಂಘರ್ಷವನ್ನು ಸಾಧನಗಳನ್ನಾಗಿ ಬಳಸಿಕೊಳ್ಳುತ್ತಿದೆ.

     ಜನರ ಸಾಮೂಹಿಕ ಕೋಪ ಮತ್ತು ವಿರೋಧ ಪಕ್ಷದ ಮೈತ್ರಿ ಭಾರತದ ಬಲವು 2024 ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಉದಯನಿಧಿ ಸ್ಟಾಲಿನ್ ಭವಿಷ್ಯ ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap