ಬೆಳಗಾವಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ..!

ಬೆಳಗಾವಿ:

      ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ ಬಳಿಕ  ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದ್ದು  ಚೆನ್ನಮ್ಮ ವೃತ್ತದಿಂದ  ಮಾಲಿನಿ ಸಿಟಿಯವರೆಗೂ ಸುಮಾರು 10.7 ಕಿ.ಮೀ. ದೂರದವರೆಗೂ ಬಿಗಿ ಭದ್ರತೆಯಲ್ಲಿ ಮೋದಿ ರೋಡ್ ಶೋ ನಡೆಸಿದರು. 

     ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಹರ ಹರ ಮೋದಿ ಎಂಬ ಘೋಷಣೆ ಕೂಗಿ ಕಾರಿನ ಮೇಲೆ ಹೂ ಮಳೆ ಸುರಿದರು. ಕಟ್ಟಡಗಳ ಮೇಲೇರಿದ ಜನರು, ಬಿಜೆಪಿ ಭಾವುಟ ಪ್ರದರ್ಶಿಸುತ್ತಾ, ಮೋದಿ ಪರ ಜೈಕಾರ ಹಾಕಿ ಹರ್ಷೋದ್ಗಾರ ಮಾಡಿದರು.

    ಕಾಲೇಜ್ ವೃತ್ತದಿಂದ  ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿವರೆಗೂ ರೋಡ್ ಶೋ ನಡೆಸಿದರು. ರೋಡ್ ಶೋ ಬಳಿಕ  ಬೃಹತ್ ಸಮಾವೇಶದಲ್ಲಿ ಮೋದಿ ಪಾಲ್ಗೊಂಡರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ