ಇಂದಿನಿಂದ ಮೋದಿ ರಾಜ್ಯ ಪ್ರವಾಸ…!

ಬೆಂಗಳೂರು

      ಕರ್ನಾಟಕದಲ್ಲಿ ಗೆದ್ದು ಮರಳಿ ಅಧಿಕಾರ ಹಿಡಿಯುವ ಛಲದಿಂದ ಪ್ರಧಾನಿ ನರೇಂದ್ರಮೋದಿ ಶನಿವಾರದಿಂದ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮುಂದಿನ ಆರು ದಿನಗಳ ಕಾಲ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ನರೇಂದ್ರಮೋದಿ ಅವರು,ಈ ಅವಧಿಯಲ್ಲಿ ರೋಡ್ ಷೋ ನಡೆಸಲಿದ್ದಾರಲ್ಲದೆ,ಹಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

     ಪ್ರಧಾನಿಗಳ ಪ್ರವಾಸ ಮಾರ್ಗವನ್ನು ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರು ನೋಡಿಕೊಳ್ಳುತ್ತಿದ್ದು,ಪ್ರಧಾನಿಯವರ ಈಗಿನ ಪ್ರವಾಸದಿಂದ ಬಿಜೆಪಿಯ ಬಲ ಹೆಚ್ಚಾಗಲಿದೆ ಎಂದು ಪಕ್ಷ ಭಾವಿಸಿದೆ.

    ಬರಲಿರುವ ಮಧ್ಯಪ್ರದೇಶ,ಛತ್ತೀಸ್ ಘಡ ರಾಜ್ಯಗಳ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕರ್ನಾಟಕದಲ್ಲಿ ನಾವು ಗೆಲುವು ಗಳಿಸುವುದು ಅನಿವಾರ್ಯ ಎಂದು ಪ್ರಧಾನಿ ನರೇಂದ್ರಮೋದಿಯವರು ಭಾವಿಸಿದ್ದು,ಇದಕ್ಕೆ ಪೂರಕವಾಗಿ ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ರಾಜ್ಯದ ನಾಯಕರ ಜತೆ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಗೆದ್ದು ಮರಳಿ ಅಧಿಕಾರ ಹಿಡಿದರೆ ಮಧ್ಯಪ್ರದೇಶ,ಛತ್ತೀಸ್ ಘಡ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೂ ಪೂರಕ ಪ್ರಭಾವ ಬೀಳಲಿದ್ದು,ಆ ಮೂಲಕ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸುಗಮವಾಗಲಿದೆ. 

    ಆ ದೃಷ್ಟಿಯಿಂದ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಬಣ್ಣಿಸಲಾಗುತ್ತಿರುವ ಕರ್ನಾಟಕದಲ್ಲಿ ಶತಾಯ ಗತಾಯ ನಾವು ಅಧಿಕಾರ ಹಿಡಿಯಲೇಬೇಕು ಎಂದು ಹಠ ತೊಟ್ಟಿರುವ ನರೇಂದ್ರಮೋದಿಯವರು,ಇದೀಗ ರಾಜ್ಯದ ನಾಯಕರನ್ನು ಹುರಿದುಂಬಿಸಿದ್ದು,ಇದಕ್ಕೆ ಪೂರಕವಾಗಿ ಶನಿವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಸಂಚರಿಸಲಿದ್ದಾರೆ.

ಪ್ರಧಾನಿ ನರೇಂದ್ರಮೋದಿಯವರ ಪ್ರಚಾರದಿಂದ ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ ಏಳಲಿದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದು,ಇಂತಹ ಅಲೆ ತಮ್ಮನ್ನು ಮರಳಿ ಅಧಿಕಾರದ ಗದ್ದುಗೆಗೆ ಕರೆದೊಯ್ಯಲಿದೆ ಎಂದು ನಂಬಿಕೊAಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap