ಮತ್ತೆ ಸುದ್ದಿಯಲ್ಲಿದ್ದಾರೆ ಮೊಹಮ್ಮದ್‌ ಸಿರಾಜ್‌ : ಯಾಕೆ ಗೊತ್ತಾ…?

ತೆಲಂಗಾಣ : 

    ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ಬಳಿಕ ಭಾರತಕ್ಕೆ ಹಿಂತಿರುಗಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಆಟದಿಂದಲ್ಲ. ಬದಲಾಗಿ ಕೋಟಿ ಬೆಲೆಯ ಹೊಸ ಕಾರು ಖರೀದಿಸುವ ಮೂಲಕ ಎಂಬುದು ವಿಶೇಷ. ಹೌದು, ಮೊಹಮ್ಮದ್ ಸಿರಾಜ್ ತಮ್ಮ ಕುಟುಂಬಕ್ಕಾಗಿ ಅದ್ಭುತವಾದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿಸಿದ್ದಾರೆ. ಈ ಸಂತಸವನ್ನು ಟೀಮ್ ಇಂಡಿಯಾ ವೇಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕಪ್ಪು ಬಣ್ಣದ ಲ್ಯಾಂಡ್ ರೋವರ್‌ನೊಂದಿಗೆ ನಿಂತಿರುವ ಫೋಟೋವನ್ನು ಸಿರಾಜ್ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದ್ದು, ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಅವರ ಕಾರಿನ ಬೆಲೆ ಕೂಡ ಚರ್ಚೆಗೀಡಾಗಿದೆ.

   ಮೊಹಮ್ಮದ್ ಸಿರಾಜ್ ನೂತನವಾಗಿ ಖರೀದಿಸಿರುವ ಐಷರಾಮಿ ಕಾರಿನ ಬೆಲೆ ಸುಮಾರು 2.39 ಕೋಟಿ ರೂ. ಎಂದು ತಿಳಿದು ಬಂದಿದೆ. ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಂಡಿರುವ ಖುಷಿಯನ್ನು ಸಿರಾಜ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ .ಅಂದಹಾಗೆ ಮೊಹಮ್ಮದ್ ಸಿರಾಜ್ ಐಪಿಎಲ್​ ಸೀಸನ್​ನಲ್ಲಿ 7 ಕೋಟಿ ರೂ. ಪಡೆಯುತ್ತಿದ್ದಾರೆ. ಆರ್​ಸಿಬಿ ಫ್ರಾಂಚೈಸಿಯು ಸಿರಾಜ್ ಅವರಿಗೆ ಏಳು ಕೋಟಿ ರೂ. ಸಂಭಾವನೆ ನೀಡುತ್ತಿದ್ದು, ಈ ಬಾರಿ ಕೂಡ ಅವರನ್ನು ಬೃಹತ್ ಮೊತ್ತ ನೀಡಿ ತಂಡದಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ. 

Recent Articles

spot_img

Related Stories

Share via
Copy link
Powered by Social Snap