ವಿಜೃಬಣೆಯಿಂದ ಮೊಹರಂ ಹಬ್ಬ ಆಚರಣೆ

ಪಾವಗಡ

      ಹಿಂದು ಮತ್ತು ಮುಸ್ಲಿಂ ಎರಡು ಧರ್ಮಗಳು ಸೇರಿ ಜಾತಿ ಭೇದವನ್ನು ಮರೆತು ಮಾನವರೆಲ್ಲರು ಒಂದೆ ಎಂಬ ಮನೋಬಾವುಳ್ಳ ಹಬ್ಬವಾಗಿದ್ದು, ಹಿಂದು ಮತ್ತು ಮುಸ್ಲಿಂ ಬಾಯ್ ಬಾಯ್ ಎಂದು ಭಾನುವಾರ ವಿಜೃಬನೆಯಿಂದ ಮೊಹರಂ ಹಬ್ಬವನ್ನು ಅಚ್ಚರಿಸಲಾಯಿತು.
ಬಾಬಯ್ಯನ ಅರ್ಚಕ ಖಾಸಿಂಸಾಬ್‍ರವರು ಮಾತನಾಡಿ ರೊಪ್ಪ ಗ್ರಾಮದಲ್ಲಿ ವರ್ಷಕೋಮ್ಮೆ ಮೊಹರಂ ತಿಂಗಳಿನಲ್ಲಿ ಗ್ರಾಮದ ಎಲ್ಲ ಜನಾಂಗದವರು ಒಗ್ಗಟಿನಿಂದ ಯಾವು ಘಟನೆಗಳಿಗೆ ಎಡಮಾಡದೆ ಸಂತೋಷದಿಂದ ಅರ್ಚರಿಸುತ್ತವೆ ಎಂದರು.

      ರೊಪ್ಪ ಗ್ರಾಮದಲ್ಲಿ ಹಾಗೂ ಪಟ್ಟಣದ ದಳವಾಯಿ ಬೀದಿಯಲ್ಲಿರುವ ಪುರಾತನ ಬಾಬಯ್ಯನ ಗುಡಿಯಲ್ಲಿ ಒಂದೇ ಸಮಯಕ್ಕೆ ಹಿಂದು ಮುಸ್ಲಿಂ ಮರು ಕೆಂಡತುಳಿದು ಭಕ್ತಿಯ ಪರಾಕಾಷ್ಠೆಯನ್ನು ಮೆರದರು. ಶನಿವಾರ ರಾತ್ರಿ ಭಕ್ತರು ಉಪವಾಸ ಆಚರಣೆ ಮಾಡಿ, ಕೆಂಡ ತುಳಿಯುವರು ಗುಡಿಯ ಬಳಿ ಆಗಮಿಸಿ ರಾತ್ರಿ ಇಡೀ ತಮಟೆಗಳ ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಜಾಗರಣೆ ಮಾಡುವರು ಬೆಳಗಿನ ಜಾವ 5 ಗಂಟೆಗೆ ಸರಿಯಾಗಿ ಉರಿಯುವ ಕೆಂಡದ ಮೇಲೆ ದೇವರ ಹೆಸರನ್ನು ಕೂಗುತ್ತಾ ಕೆಂಡ ತುಳಿದರು.

      ಪಟ್ಟಣದ ದಳವಾಯಿ ಬೀದಿಯಲ್ಲಿ ಇರುವ ಹಾಗೂ ರೊಪ್ಪ ಗ್ರಾಮದಲ್ಲಿ ಬಾಬಯ್ಯ ದೇವರಗಳನ್ನು ಒಂದೆ ಕಡೆಗೆ ಸೇರಿಸಿದ ನಂತರ ನವಾಬಗಳು ಪೊಜೆ ಸಲ್ಲಿಸಿ ಸವಿರ್ಸಜನೆ ಮಾಡಿದರು.

       ಈ ಸಂಧರ್ಭದಲ್ಲಿ ರೊಪ್ಪ ಗಾ.ಪಂ.ಅಧ್ಯಕ್ಷರಾದ ನಾಗಮಣಿಮೂರ್ತಿ,ಮಾಜಿ ಸದಸ್ಯರಾದ ಎಸ್.ಹನುಮಂತರಾಯ, ಗೋಪಾಲಪ್ಪ, ಗ್ರಾಮಸ್ಥರಾದ. ನಾಗರಾಜು,ಮಲ್ಲಯ್ಯ,ಬಾಬು,ಜಡಪ್ಪ,ಪೆದ್ದಣ್ಣ,ಸದಾನಂದ,ವೆಂಕಟೇಶ್, ತಾಡಪ್ಪ,
ವೆಂಕಟರವಣ,ಕೃಷ್ಣಪ್ಪ,ರಾಮಕೃಷ್ಣ,ಹಾಜರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap