ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಹಣ ದುರುಪಯೋಗ

ತುಮಕೂರು:

     ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಹಣ ದುರುಪಯೋಗವಾಗಿರುವ ಬಗ್ಗೆ ಗಂಭೀರ ಆಪಾಧನೆಗಳು ಕೇಳಿಬಂದಿದ್ದು, ಈ ಸಂಬAಧ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

    ತುಮಕೂರು ಜಿಲ್ಲಾಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಇವರಿಂದ ಸಂಗ್ರಹವಾಗುವ ಹಣ ಸೇರಿದಂತೆ ಇತರೆ ಬಾಬತ್ತುಗಳ ಹಣವನ್ನು ಆರೋಗ್ಯ ರಕ್ಷಾ ಸಮಿತಿಗೆ ಜಮಾ ಮಾಡಲಾಗುತ್ತದೆ. ಆದರೆ ಹೀಗೆ ಜಮೆ ಮಾಡಿರುವ ಹಣದ ಮೊತ್ತದಲ್ಲಿ ಸಾಕಷ್ಟು ವ್ಯತ್ಯಾಸವಾಗಿರುವುದು ಗುಸುಗುಸು ಉಂಟಾದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು.

    ಆಸ್ಪತ್ರೆಯಲ್ಲಿ ಸಂಗ್ರಹವಾಗುವ ಹಣ ಆರೋಗ್ಯ ರಕ್ಷಾ ಸಮಿತಿಗೆ ಜಮೆಯಾಗುವುದರಿಂದ ಅಲ್ಲಿ ಜಮೆಯಾಗುವ ಹಣದಲ್ಲಿ ವ್ಯತ್ಯಾಸವಾಗಲು ಕಾರಣ ಏನು? ಜನರಿಂದ ಸಂಗ್ರಹವಾಗುವ ಈ ಹಣ ದುರುಪಯೋಗವಾಗುವುದು ಹೇಗೆ ಇತ್ಯಾದಿ ಚರ್ಚೆಗಳು ಆರಂಭವಾಗಿದ್ದವು. ಈ ವಿಷಯ ಮೇಲಧಿಕಾರಿಗಳಿಗೂ ತಲುಪಿದ ಹಿನ್ನೆಲೆಯಲ್ಲಿ ಹಾಗೂ ದೂರು ರವಾನೆಯಾದ ಬಳಿಕ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹನಿರ್ದೇಶಕರು ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆದಿದ್ದರು.

    ಇಲಾಖೆಯ ಅಡಿಯಲ್ಲಿ ಸದರಿ ದೂರಿನ ಬಗ್ಗೆ ವಿವಿಧ ದಿನಾಂಕಗಳಲ್ಲಿ ವಿಚಾರಣೆ ನಡೆಸಿ ಪರಿಶೀಲಿಸಿದಾಗ ಆರೋಗ್ಯ ರಕ್ಷಾ ಖಾತೆಗೆ ಜಮೆಯಾಗಬೇಕಿದ್ದ 67 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಬಟಾಬಯಲಾಗಿದೆ. ಗಣಕ ಯಂತ್ರ ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರು ಸೇರಿಕೊಂಡು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವರದಿಗಳು ಲಭ್ಯವಾಗಿವೆ.

    ಆರೋಗ್ಯ ರಕ್ಷಾ ಸಮಿತಿಗೆ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಲು ಹಾಗೂ ಇವರುಗಳ ಮೇಲ್ವಿಚಾರಣೆಯಲ್ಲಿ ಎಲ್ಲ ಅಧಿಕಾರಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಗಣಕಯಂತ್ರ ಸಹಾಯಕರನ್ನು ತಕ್ಷಣದಿಂದಲೆ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಬೇರೆಯವರನ್ನು ನೇಮಿಸಿಕೊಳ್ಳುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆಯೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

    ಇ-ಹಾಸ್ಪಿಟಲ್ ಯೋಜನೆಯಡಿ 12 ಮಂದಿ ಗಣಕ ಯಂತ್ರ ಸಹಾಯಕರುಗಳು ನೇಮಕ ಗೊಂಡಿರುತ್ತಾರೆ. ಈ ಅಂಶವನ್ನು ಸಹ ಹೆಸರು ಸಮೇತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap