ತುಮಕೂರು:
ಕೌಟುಂಬಿಕ ಕಲಹದಿಂದ ಬೇಸತ್ತು 5 ತಿಂಗಳ ಹಿಂದಷ್ಟೇ ತನಗಿಂತ ಇಪ್ಪತ್ತು ವರ್ಷ ವಯಸ್ಸಿನ ಚಿಕ್ಕ ಯುವತಿಯನ್ನು ಮದುವೆಯಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಕ್ಕಿಮರಿ ಪಾಳ್ಯದಲ್ಲಿ ನಡೆದಿದೆ.
ಶಂಕ್ರಣ್ಣ ಆತ್ಮಹತ್ಯೆ ವಿಚಾರವಾಗಿ ಆರೋಪ-ಪ್ರತ್ಯಾರೋಪ ಮಾಡಲಾಗುತ್ತಿದ್ದು, ಈ ವಿಚಾರವಾಗಿ ಶಂಕ್ರಣ್ಣ ತಾಯಿ, ಮಗನ ಸಾವಿಗೆ ಸೊಸೆ ಮೇಘನಾ ಕಾರಣ ಎಂದು ಆರೋಪ ಮಾಡಿದ್ದಾರೆ. ನಿನ್ನೆ ನಾನು ಎಮ್ಮೆ ಹೊಡೆದುಕೊಂಡು ಬರುತ್ತಿದ್ದೆ, ಈ ವೇಳೆ ಸೊಸೆ ಮೇಘನಾ ನಾಯಿ ಬಿಟ್ಟಿದ್ದಾಳೆ. ಇದರಿಂದ ಎಮ್ಮೆ ಗಾಬರಿ ಆಯ್ತು, ನಾನು ಬೀಳುತ್ತಿದ್ದೆ. ಆಗ ನಾನು ಸೊಸೆಗೆ ನಾಯಿ ಕಚ್ಚಿದ್ದರೆ ಏನು ಮಾಡುತ್ತಿದ್ದೆ ಎಂದು ಬೈದೆ ಬುದ್ದಿ ಹೇಳಿದೆ.
ನಂತರ ಈ ವಿಚಾರವಾಗಿ ಜಗಳ ಶುರುವಾಗಿ, ನನ್ನ ಮಗನಿಗೆ ದೂರು ಹೇಳಿದೆ. ನನ್ನನ್ನು ಮನೆಯಿಂದ ಹೊರಗೆ ತಳ್ಳುವಂತೆ ಸೊಸೆ ಮಗನಿಗೆ ಹೇಳಿದಳು. ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನು ಹೊಡೆಯಲು ಮಗ ಬಂದ. ನಂತರ ಹೇಗಾದ್ರೂ ಜಗಳವಾಡಿ ಅಂತ ಸಂಜೆ ಮನೆಯಿಂದ ಹೊರಗೆ ಹೋದ ಶಂಕ್ರಣ್ಣ.
ಮದುವೆಯಾದ ದಿನದಿಂದ ಗಂಡ-ಹೆಂಡತಿ ಜಗಳ ವಾಡುತ್ತಿದ್ದರು. ನನಗೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ನಾನು ಬೇರೆ ಅಡುಗೆ ಮಾಡಿಕೊಂಡಿದ್ದೆ. ಅವಳಿಗೆ ಹಣ, ಆಸ್ತಿ ಬೇಕಿತ್ತಂತೆ. ಮೇಘನಾ ಹಾಗೂ ನನ್ನ ಮಗನ ಮದುವೆ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಮದುವೆಗೆ ಒಪ್ಪಿಕೊಂಡಿರಲಿಲ್ಲ.
ಮದ್ವೆಯಾದ 5 ತಿಂಗಳಲ್ಲೇ ಘೋರ ದುರಂತ : ತನಗಿಂತ 20 ವರ್ಷ ಚಿಕ್ಕವಳ ಜೊತೆಗೆ ಮದ್ವೆಯಾಗಿದ್ದ ಶಂಕ್ರಣ್ಣ ನೇಣಿಗೆ ಶರಣು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
