ಬೆಂಗಳೂರು:
ಮಾತುಬಾರದ, ಬುದ್ಧಿಮಾಂದ್ಯ ಮಗುವನ್ನು ಹೆತ್ತ ತಾಯಿಯೇ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಅಮಾನುಷ ಘಟನೆಯೊಂದು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಗುರುವಾರ ನಡೆದಿದೆ.
3 ವರ್ಷ 10 ತಿಂಗಳ ಮಗು ಪ್ರೀತಿಕಾ ಮೃತ ದುರ್ದೈವಿಯಾಗಿದೆ. ಪ್ರಕರಣದಲ್ಲಿ ಸುಬ್ರಮಣ್ಯಪುರ ಠಾಣಾ ಪೊಲೀಸರು 35 ವರ್ಷದ ರಮ್ಯಾ ಎಂಬಾಕೆಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ರಮ್ಯಾ ಗೃಹಿಣಿಯಾಗಿದ್ದು, ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಅತ್ತೆ-ಮಾವ ಅವರೊಂದಿಗೆ ನೆಲೆಸಿದ್ದಾರೆ. ಆಕೆಯ ಪತಿ ನಾರ್ವೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ.
ದಂಪತಿಗೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಮುದ್ದಾದ ಅವಳಿ ಹೆಣ್ಣು ಮಕ್ಕಳಿದ್ದರು. ಆದರೆ, ಅವಳಿ ಮಕ್ಕಳಲ್ಲಿ ಒಂದು ಮಗು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು, ಇದೇ ಕಾರಣಕ್ಕೆ ತಾಯಿಯೇ ಉಸಿರುಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಗು ಶಾಲೆಗೆ ಹೋಗುತ್ತಿದೆ.
ಒಂದು ಮಗು ಆರೋಗ್ಯವಾಗಿದ್ದು, ಮತ್ತೊಂದು ಮಗು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಮನನೊಂದಿದ್ದ ರಮ್ಯಾ ಅವರು, ತಮ್ಮ ವೇಲಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಆ ಬಳಿಕ ಮಗುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಾಟಕ ಮಾಡಿದ್ದಾರೆನ್ನಲಾಗಿದೆ. ಮಗುವಿನ ದೇಹ ಕಂಡ ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
