ಮೈಸೂರು
ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎನ್ನಲಾಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಒಟ್ಟು 14 ನಿವೇಶನಗಳಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮುಡಾದಿಂದ ಮಂಜೂರಾದ ವಿಜಯನಗರ 3ನೇ ಹಂತ ಸಿ, ಡಿ, ಇ ಮತ್ತು ಜಿ ಬ್ಲಾಕ್ನಲ್ಲಿ ನಿವೇಶನ ಸಂಖ್ಯೆ 25, 331, 332,213, 214, 215, 05 ಮತ್ತು ವಿಜಯನಗರ 4ನೇ ಹಂತ 2ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065 ಮತ್ತು 12068 ಸಂಖ್ಯೆಯ ಒಟ್ಟು 13 ನಿವೇಶನಗಳ ಖಾತೆ ನೋಂದಣಿ ಕೋರಿ ಪಾರ್ವತಿ ಅವರು 2022 ಜನವರಿ 1 ರಂದು ಪತ್ರ ಬರೆದಿದ್ದರು.
ಈ ಪತ್ರಕ್ಕೆ ಪಾರ್ವತಿ ಅವರ ಬದಲಿಗೆ ಮುಖ್ಯಮಂತ್ರಿಗಳು ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಸಹಿ ಹಾಕಿದ್ದಾರೆ. ಅರ್ಜಿದಾರ ಹೊರತುಪಡಿಸಿ ಉಳಿದವರಿಗೆ ಸಹಿ ಮಾಡಲು ಅವಕಾಶವಿಲ್ಲ. ಇದು ಗೊತ್ತಿದ್ದೂ ಅಧಿಕಾರಿಗಳು ನಿವೇಶನ ಖಾತೆ ಮಾಡಿದ್ದಾರೆ. ಕೇಳಿದ್ದು ಮಂಜೂರಾಗಿದ್ದ 13 ನಿವೇಶನ, ಆದರೆ 14 ನಿವೇಶನ ಖಾತೆ ಮಾಡಿಕೊಡಲಾಗಿದೆ.