ತೆಲಂಗಾಣ:
ಕೆಲ ಸೆಲೆಬ್ರಿಟಿಗಳು ಏನೇ ಮಾಡಿದರೂ ಲಾಭದ ಉದ್ದೇಶದಿಂದಲೇ ಮಾಡುತ್ತಾರೆ. ಏನು ಮಾಡಿದರೆ ಲಾಭ ಮಾಡಬಹುದು ಎಂದು ಲೆಕ್ಕ ಹಾಕುತ್ತಾರೆ. ಈಗ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಜೋಡಿ ಕೂಡ ಇದನ್ನೇ ಮಾಡಿದೆ. ತಮ್ಮ ಮದುವೆ ಪ್ರಸಾರ ಹಕ್ಕನ್ನು ನೆಟ್ಫ್ಲಿಕ್ಸ್ಗೆ 50 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಟೀಕಿಸಿದ್ದಾರೆ.
ಅಕ್ಕಿನೇನಿ ಕುಟುಂಬದ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ನೆರವೇರಲಿದೆ. ಡಿಸೆಂಬರ್ 4ರಂದು ಈ ವಿವಾಹ ಏರ್ಪಡಲಿದೆ. ಈಗಾಗಲೇ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭ ಆಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಲಿದ್ದಾರೆ. ಈ ವಿವಾಹದ ಪ್ರಸಾರದ ಹಕ್ಕನ್ನು ನೆಟ್ಫ್ಲಿಕ್ಸ್ಗೆ ಈ ಜೋಡಿ ಮಾರಾಟ ಮಾಡಿದೆ ಎನ್ನಲಾಗಿದೆ.
ಸದ್ಯ ನಾಗ ಚೈತನ್ಯ ಹಾಗೂ ಶೋಭಿತಾ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಒಂದೊಮ್ಮೆ ಇದು ನಿಜವೇ ಆದಲ್ಲಿ ನೆಟ್ಫ್ಲಿಕ್ಸ್ ಕಡೆಯಿಂದಲೇ ಈ ವಿವಾಹದ ವಿಡಿಯೋಗಳು ಹೊರ ಬರಲಿವೆ. ಅದನ್ನು ಹಣ ಕೊಟ್ಟು ವೀಕ್ಷಣೆ ಮಾಡಬೇಕು. ಅಲ್ಲಿಯವರೆಗೆ ಫ್ಯಾನ್ಸ್ಗೆ ವಿವಾಹದ ವಿಡಿಯೋ ನೋಡೋಕೆ ಸಾಧ್ಯವಿಲ್ಲ. ಕಾಲಿವುಡ್ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡುವ ಮನೋಬಲ ವಿಜಯಬಾಲನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.