ನಾಲಿಗೆ ಹರಿಬಿಟ್ಟ ಮಾಜಿ ಸಚಿವ….!

ಮುಂಬೈ:

    ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಶಾಸಕರನ್ನು ಹತ್ಯೆ ಮಾಡಿ ಎಂದು ಮಾಜಿ ಸಚಿವನೊಬ್ಬ ವಿವಾದಾತ್ಮಕ ಹೇಳಿಕೆ  ನೀಡಿರುವುದು ಭಾರೀ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಪ್ರಹಾರ್ ಸಂಘಟನೆಯ ಮುಖ್ಯಸ್ಥ ಬಚ್ಚು ಕಡು, ಬುಲ್ಧಾನಾ ಜಿಲ್ಲೆಯ ಪತುರ್ಡಾ ಗ್ರಾಮದ ಜನರನ್ನುದ್ದೇಶಿಸಿ ಮಾತನಾಡಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಜನಪ್ರತಿನಿಧಿಗಳನೇ ಮುಗಿಸಿ ಬಿಡಿ ಎಂದಿದ್ದಾರೆ.

   ಹತ್ತಿ ಬೆಳೆಗೆ 3,000 ರೂ. ಬೆಲೆ ಸಿಕ್ಕರೆ, ನೀವು ಏನು ಮಾಡುತ್ತೀರಿ? ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ ಎಂದು ಹೇಳುತ್ತೀರಿ. ಹೇ, ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಯಾರನ್ನಾದರೂ ಕೊಂದರೆ, ಶಾಸಕರನ್ನು ಕಡಿದರೆ, ಆತ್ಮಹತ್ಯೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಶಾಸಕರ ಮನೆಗೆ ಹೋಗಿ, ನಿಮ್ಮ ಎಲ್ಲಾ ಬಟ್ಟೆಗಳನ್ನು ತೆಗೆದು ಅಲ್ಲಿ ಕುಳಿತು, ಮನೆಯ ಮುಂದೆ ಮೂತ್ರ ವಿಸರ್ಜಿಸುವುದು ಉತ್ತಮ. ಅದು ಸಾಯುವುದಕ್ಕಿಂತ ಉತ್ತಮ ಎಂದು ಸೂಚಿಸಿದರು.

    ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಆಗಸ್ಟ್‌ನಲ್ಲಿ ಕಾಡು ಶಿಕ್ಷೆಗೊಳಗಾದ ಕೆಲವೇ ತಿಂಗಳುಗಳ ನಂತರ ಈ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿವೆ. ಮಹಾರಾಷ್ಟ್ರದ ನ್ಯಾಯಾಲಯವು ಬಚ್ಚು ಕಡು ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿತ್ತು. 

   ಮಧ್ಯ ಪ್ರದೇಶದ ಹಿಂದು ಪರ ಸಂಘಟನೆಯ ನಾಯಕಿ, ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌  ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಹಿಂದುಯೇತರರ ಮನೆಗೆ ಹೋಗದಂತೆ ತಡೆಯಬೇಕು. ಒಂದುವೇಳೆ ಮಾತನ್ನು ಮೀರಿಯೂ ಹೋದರೆ ಅವರ ಕಾಲನ್ನು ಮುರಿಯಬೇಕು ಎಂದು ಕರೆ ನೀಡಿದ್ದಾರೆ. ಸದ್ಯ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕಾಂಗ್ರೆಸ್‌ ಪ್ರಜ್ಞಾ ಠಾಕೂರ್‌ ವಿರುದ್ಧ ಕಿಡಿ ಕಾರಿದ್ದು, ಬಿಜೆಪಿ ದ್ವೇಷದ ಹೇಳಿಕೆ ನೀಡಿ ಸಮಾಜವನ್ನು ಒಡೆಯಲು ಶ್ರಮಿಸುತ್ತಿದೆ ಎಂದಿದ್ದಾರೆ.

   ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಹೆತ್ತವರ ಮಾತು ಕೇಳದ ಹೆಣ್ಣು ಮಕ್ಕಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಬೇಕು ಎಂದು ಹೇಳಿದರು. ಸದ್ಯ ಅವರ ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. “ನಿಮ್ಮ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಿ. ನಿಮ್ಮ ಮಗಳು ಮಾತನ್ನು ಕೇಳದಿದ್ದರೆ, ಅವಳು ಹಿಂದುಯೇತರ ಮನೆಗೆ ಹೋದರೆ, ಅವಳ ಕಾಲುಗಳನ್ನು ಮುರಿಯಲೂ ಹಿಂಜರಿಯಬೇಡಿ. ಮೌಲ್ಯಗಳನ್ನು ಪಾಲಿಸದ ಮತ್ತು ಪೋಷಕರ ಮಾತನ್ನು ಕೇಳದವರಿಗೆ ಶಿಕ್ಷೆಯಾಗಬೇಕು. ನೀವು ನಿಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಹೊಡೆಯುವುದು ತಪ್ಪಲ್ಲ. ಪೋಷಕರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link