ಬೆಂಗಳೂರು :
ವಿಶ್ವ ವಿಖ್ಯಾತ ನಂದಿ ಗಿರಿಧಾಮದ ರೋಪ್ ವೇ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಉದ್ದೇಶಿತ ರೋಪ್ ವೇ ನಿರ್ಮಾಣ ಕಾಮಗಾರಿಯ ಸ್ಥಳ ಹಾಗೂ ವಾಹನ ಪಾರ್ಕಿಂಗ್ ಸ್ಥಳವನ್ನು ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರವಾಸೋದ್ಯಮ ಇಲಾಖೆ ಒಡೆತನಕ್ಕೆ ನಂದಿ ಗಿರಿಧಾಮ ದೊರೆತಿದ್ದು, ರಾಜ್ಯದಲ್ಲಿ ಇದುವರೆಗೂ ರೋಪ್ ವೇಗೆ ಯೋಜನೆಯೇ ಆಗಿರಲಿಲ್ಲ.
ನಂದಿ ಗಿರಿಧಾಮ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿರುವುದರಿಂದ ಸುರಕ್ಷತೆ ಮತ್ತು ತಾಂತ್ರಿಕತೆ ಸೇರಿದಂತೆ ಎಲ್ಲಾ ದೃಷ್ಟಿಯಿಂದಲೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ಕಾಲಮಿತಿಯೊಳಗೆ ರೋಪ್ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇಂದು ತಜ್ಞರ ತಂಡದಿಂದ ಅಂತಿಮ ಯೋಜನಾ ವರದಿ ಸಿದ್ದವಾಗಲಿದೆ. ಈಗಾಗಲೇ ಹಲವು ಸಭೆಗಳು ಈ ಸಂಬಂಧ ನಡೆದಿದ್ದು, ಅಂತಿಮ ರೂಪ ಕೊಡಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ