ಅಪಘಾತ : ಯುವತಿ ಬಲಿಪಡೆದ ಶಾಸಕನ ಪುತ್ರ ಅರೆಸ್ಟ್

0
43

ಬೆಳಗಾವಿ:

      ಕಾರು ಹರಿದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟೆಕ್ಲೋ ಅವರನ್ನು ಪೊಲೀಸರು ಬಂಧಿಸಿದ್ದಾರೆ.

      ಆಜಾದ್‌ ನಗರದದ ನಿವಾಸಿಯಾಗಿರುವ ಸ್ಯಾನಿಯತ್‌ ವಾಹಿದ್‌ ಬಿಸ್ತಿ (18) ಮೃತರು. ಸಮ್ರೀನ್‌ ಬಿಸ್ತಿ ಗಂಭೀರ ಗಾಯಗೊಂಡಿದ್ದಾರೆ. 

      ನಿನ್ನೆ ಸಂಜೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4 ರ ಹಣ್ಣಿನ ಮಾರ್ಕೆಟ್ ಬಳಿ ಅಪಘಾತ ಸಂಭವಿಸಿತ್ತು. ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ ಯುವತಿ ತಾಹಿನಿಯತ್ ಬಿಸ್ಟಿಗೆ ಕೈಲ್ ಟಿಕ್ಲೋ ಅವರ ಬಿಎಂಡಬ್ಲೂ ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

      ಅಪಘಾತವಾದ ಕೂಡಲೇ ಕೈಲ್ ಟಿಕ್ಲೋ ಪರಾರಿಯಾಗಿದ್ದನು. ಸಿಟ್ಟಿಗೆದ್ದ ಸ್ಥಳೀಯರು ಕಾರಿಗೆ ಬೆಂಕಿ ಹಚ್ಚಿದ್ದರು. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರು ಬೆಂಗಳೂರಿನಿಂದ ಗೋವಾಗೆ ತೆರಳುತ್ತಿರುವಾಗ ಘಟನೆ ನಡೆದಿದೆ. ಘಟನೆ ಸಂಬಂಧ ಗೋವಾ ಶಾಸಕನ ಪುತ್ರನನ್ನು ಸಂಚಾರಿ ಉತ್ತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here