ಸೈನ್ಯದ ಹೆಸರು ದುರ್ಬಳಕೆ : ರಾಷ್ಟ್ರಪತಿಗಳಗೆ ದೂರು ..!!

ನವದೆಹಲಿ:

        ಭಾರತೀಯ ಸೇನೆಯ ಮೂರೂ ವಿಭಾಗದ ಮಾಜಿ ಸೇನಾ ಮುಖ್ಯಸ್ಥರು, ಮಾಜಿ ನೌಕಾಪಡೆಯ ಮುಖ್ಯಸ್ಥರು ಮತ್ತು ಮಾಜಿ ವಾಯುಪಡೆ ಮುಖ್ಯಸ್ಥ ಸೇರಿದಂತೆ 150 ಕ್ಕೂ ಹೆಚ್ಚು ಸಶಸ್ತ್ರ ಪಡೆಗಳ ಪರಿಣತರ ತಂಡವು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ರಾಜಕೀಯ ಪಕ್ಷಗಳು ಪದೇ ಪದೇ ಸೇನೆಯ ವಿಷಯವನ್ನು ತಮ್ಮ ರಾಜಕೀಯದ ಲಾಭಕ್ಕಾಗಿ  ಬಳಸುತ್ತಿರುವುದು ಸರಿಯಿಲ್ಲ ಎಂದು ದೂರು ನೀಡಿದ್ದಾರೆ.

      ಈ ಪತ್ರದಲ್ಲಿ ಯಾವುದೇ ರಾಜಕೀಯ ಪಕ್ಷವೇ ಆದರೂ ಮಿಲಿಟರಿ ಸಮವಸ್ತ್ರ ಅಥವಾ ಚಿಹ್ನೆಗಳನ್ನು ಬಳಸದಂತೆ ತಾಕೀತು ಮಾಡುವುದು ಮತ್ತು ಮಿಲಿಟರಿ ರಚನೆಗಳು ಅಥವಾ ಸಿಬ್ಬಂದಿಗಳ ಯಾವುದೇ ಕ್ರಮಗಳು ರಾಜಕೀಯ ಉದ್ದೇಶಗಳಿಗಾಗಿ ಅಥವಾ ರಾಜಕೀಯ ಕಾರ್ಯ ಸೂಚಿಗಳಿಗಾಗಿ ಬಳಸುವುದು ಮತ್ತು ಇನ್ನು ಬೇರೆ ರೀತಿಯಲ್ಲಿ ಮಿಲಿಟರಿ ವಿಷಯವನ್ನು ಬಳಸುವುದನ್ನು ನಿರ್ಬಂಧಿಸಬೇಕೆಂದು ” ರಾಮನಾಥ್ ಕೋವಿಂದ್ ರನ್ನು ಕೋರಿದ್ದಾರೆ.

      ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತು ಇನ್ನಿತರೆ ಸೇನಾ ಸಾಧನೆಗನ್ನು ರಾಜಕೀಯ ದಾಳವಾಗಿ ಬಳಸಿರುವುದು ಅತ್ಯಂತ ಾತಂಕಕಾರಿಯಾಗಿದೆ 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link