ಮುಂಬೈ
ಭಾನುವಾರ ರಾತ್ರಿ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿಗೆ 37 ರನ್‍ಗಳ ಜಯ ದೊರೆತಿದೆ.
ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್‍ನ ರಿಷಬ್ ಪಂತ್ ಸ್ಫೋಟಕ 78* (27 ಎಸೆತ) ರನ್ ಬಾರಿಸಿ ತಂಡ ಅತ್ಯಧಿಕ ರನ್ ಪೇರಿಸಲು ನೆರವಾದರು. ಶಿಖರ್ ಧವನ್ 43, ಕಾಲಿನ್ ಇನ್ಗ್ರಾಮ್ 47 ರನ್ ಕೊಡುಗೆಯೊಂದಿಗೆ ಡೆಲ್ಲಿ ತಂಡ 20 ಓವರ್‍ಗೆ 6 ವಿಕೆಟ್ ಕಳೆದು 213 ರನ್ ಕಲೆ ಹಾಕಿ, 214 ರನ್‍ಗಳ ಗುರಿ ನೀಡಿತ್ತು.
ಡೆಲ್ಲಿ ತಂಡ ನೀಡಿದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ವೇಗದ ರನ್ನತ್ತ ಸಾಗಿತಾದರೂ ವಿಕೆಟ್ ಕಾವಲು ಕಾಯುವಲ್ಲಿ ಎಡವಿತು. ಅದರಲ್ಲೂ ನಾಯಕ ರೋಹಿತ್ ಶರ್ಮಾ 14, ಕ್ವಿಂಟನ್ ಡಿ ಕಾಕ್ 27, ಸೂರ್ಯ ಕುಮಾರ್ ಯಾದವ್ 2, ಕೀರನ್ ಪೊಲಾರ್ಡ್ 21, ಹಾರ್ದಿಕ್ ಪಾಂಡ್ಯ 0, ಬೆನ್ ಕಟಿಂಗ್ 3 ರನ್‍ಗಳಿಗೆ ಔಟ್ ಆಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.
ಆದರೆ ಕೃನಾಲ್ ಪಾಂಡ್ಯಾ ಮತ್ತು ಯುವರಾಜ್ ಸಿಂಗ್, ಮುಂಬೈ ನಿರೀಕ್ಷೆಯನ್ನು ಕೊಂಚಕಾಲ ಜೀವಂತವಾಗಿಟ್ಟರು. ಯುವರಾಜ್ 35 ಎಸೆತಗಳಿಗೆ 53, ಕೃನಾಲ್ 15ಕ್ಕೆ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ತಂಡ ಸೋಲು ಖಚಿತವಾಗಿತ್ತು. ಡೆಲ್ಲಿ ನೀಡಿದ್ದ 214 ರನ್ ಗುರಿ ಬೆನ್ನಟ್ಟಿದ್ದ ಮುಂಬೈ 19.2 ಓವರ್‍ಗೆ ಎಲ್ಲಾ ವಿಕೆಟ್ ಕಳೆದು 176 ರನ್ ಬಾರಿಸಿ ಶರಣಾಯಿತು.
ಪಂದ್ಯದಲ್ಲಿ ಮುಂಬೈ ತಂಡದ ಯುವರಾಜ್ ಸಿಂಗ್ ಮತ್ತು ಡೆಲ್ಲಿ ತಂಡದ ರಿಷಬ್ ಪಂತ್ ಅವರ ಆಕರ್ಷಕ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿತ್ತು.
ಸ್ಕೋರ್ ವಿವರ:
ರೋಹಿತ್ ಶರ್ಮಾ 14
ಕ್ವಿಂಟನ್ ಡಿ ಕಾಕ್ 27
ಸೂರ್ಯ ಕುಮಾರ್ ಯಾದವ್ 2
ಕೀರನ್ ಪೆÇಲಾರ್ಡ್ 21
ಹಾರ್ದಿಕ್ ಪಾಂಡ್ಯ 0
ಬೆನ್ ಕಟಿಂಗ್ 3
ಯುವರಾಜ್ 53
ಕೃನಾಲ್ 32
ಮಿಚೆಲ್ ಮೆಕ್ಲನಘನ್ 10
ರಸಿಕ್ ಸಲಾಮ್ 5
ಜಸ್ಪ್ರಿತ್ ಬುಮ್ರಾ 0
ಹೆಚ್ಚುವರಿ ರನ್‍ಗಳು 9
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ