ಲಖನೌ: 
ಕೆಲವು ದಿನಗಳ ಹಿಂದೆಯಷ್ಟೇ ಯೋಗಿ ಅವರ ಸರ್ಕಾರ ಅಲಹಾಬಾದ್ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿತ್ತು. ಈಗ ಫೈಝಾಬಾದ್ ನ ಸರದಿ ಫೈಝಾಬಾದ್ ಅನ್ನು ಶ್ರೀ ಅಯೋಧ್ಯಾ ಎಂದು ಮರುನಾಮಕರಣ ಮಾಡುವಂತೆ ಒತ್ತಡ ಬರಲು ಶುರುವಾಗಿದೆ.
ಮರು ನಾಮಕರಣದ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷದ್ನ ಪುರುಷೋತ್ತಮ್ ನಾರಾಯಣ್ ಅವರು “ದಾಳಿಕೋರರ ಹಾವಳಿಗೆ ಹೆಸರುಗಳಲ್ಲಿ ಬದಲಾವಣೆ ಕಂಡ ನಗರಗಳ ಹೆಸರನ್ನು ಮತ್ತೆ ಅವುಗಳ ಹಳೆಯ ಹೆಸರನ್ನು ಇಟ್ಟು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ . ಅಲಹಾಬಾದ್ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡುವ ಮೂಲಕ ಸಾಧು ಸಂತರ ಮಾತುಗಳಿಗೆ ಯೋಗಿ ಸರಕಾರ ಬೆಲೆ ನೀಡಿದೆ. ಇದು ಸ್ವಾಗತಾರ್ಹ ಮತ್ತು ಬೇರೆ ನಗರ ಹೆಸರು ಬದಲಾವಣೆಗೂ ಆಸ್ತೆ ತೋರಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








