ನವದೆಹಲಿ:
ಭಾರತೀಯರಿಗೆ ಮೊದಲು ಅವಶ್ಯಕ ವೈದ್ಯಕೀಯ ನೆರವು ಮೊದಲು ಸಿಗುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ವಿಷಯವಾಗಿ ಟ್ವೀಟ್ ಮಾಡಿರುವ ಅವರು ಮಲೇರಿಯಾ ಮಾತ್ರೆಗಳನ್ನು ಕಳುಹಿಸದ ಪಕ್ಷದಲ್ಲಿ ಭಾರತದ ವಿರುದ್ಧ ಪ್ರತೀಕಾರಕ್ಕೆ ನಾವು ಹಿಂಜರಿಯುವುದಿಲ್ಲಾ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ ಟ್ರಂಪ್ ಮನವಿ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾನವೀಯ ನೆರವಿನ ನೆಲೆಗಟ್ಟಿನಲ್ಲಿ ವಿದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಒಟ್ಟು 24 ವಿವಿಧ ಮಾತ್ರೆಗಳನ್ನು ರಫ್ತು ಮಾಡಲು ಭಾರತ ಸಮ್ಮಿತಿ ಸೂಚಿಸಿರುವುದಕ್ಕೆ ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಮಾನವೀಯ ನೆರವು ನೀಡುವುದು ನ್ಯಾಯಸಮ್ಮತ ಎಂದಿರುವ ರಾಹುಲ್ ಗಾಂಧಿ, ಅದಾಗ್ಯೂ ಈ ಅವಶ್ಯಕ ಮಾತ್ರೆಗಳು ಮೊದಲು ಭಾರತೀಯರಿಗೆ ಲಭ್ಯವಾಗುವಂತೆ ನೊಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದಿದ್ದಾರೆ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ