ಭುವನೇಶ್ವರ್:
ಡಿಆರ್ ಡಿಒ ಬಹು ಗೌಪ್ಯವಾಗಿ ನಿರ್ಮಿಸಿ ಅಭಿವೃಧಿ ಪಡಿಸಿದ್ದ ರಾಡಾರ್ ನಿಗ್ರಹ ಕ್ಷಿಪಣಿಯ ಪರಿಕ್ಷಾರ್ಥ ಉಡಾವಣೆ ಶುಕ್ರವಾರ ಯಶಸ್ವಿಯಾಗಿದೆ.
ಡಿಆರ್ ಡಿಒ ವಿಜ್ಞಾನಿಗಳು ರಾಡಾರ್ ನಿಗ್ರಹ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದ್ದು ಮೊದಲ ಪ್ರಯತ್ನದಲ್ಲೇ ಕ್ಷಿಪಣಿ ಯಶಸ್ವಿಯಾಗುವ ಮೂಲಕ ವಿಜ್ಞಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಒಡಿಶಾ ಭಾರತೀಯ ಸೇನೆಯ ನಿಯಂತ್ರಣದಲ್ಲಿರುವ ಕರಾವಳಿ ತೀರದಲ್ಲಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಭಾರತೀಯ ಸೇನೆಯ ಸುಖೋಯ್ 30ಎಂಕೆಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








