ಕೋಲ್ಕತ್ತಾ:
ದೀದಿ ಸರ್ಕಾರ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕನೋರ್ವನನ್ನು ಕೆಲವು ಗುರುತು ಪತ್ತೆಯಾಗದ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಾಡಿಯಾ ಜಿಲ್ಲೆಯ ಸರಸ್ವತಿ ಪೂಜಾ ಟೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಇದು ಖಚಿತವಾಗಿ ಬಿಜೆಪಿ ಕುತಂತ್ರದ ಕೃತ್ಯ ಎಂದು ಟಿಎಂಸಿ ಆರೋಪಿಸಿದೆ.
ಈ ಆರೋಪವನ್ನು ಸರಾಸಗಟಾಗಿ ನಿರಾಕರಿಸಿರುವ ಬಿಜೆಪಿ ಇದು ತಮ್ಮ ಪಕ್ಷದ ವಿರುದ್ಧ ಪಕ್ಷದ ವರ್ಚಸ್ಸನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಹುನ್ನಾರ ಇದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕೃಷ್ಣಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಸ್ವಾಸ್, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸರಸ್ವತಿ ಪೂಜಾ ಟೆಂಟ್ ಗೆ ತೆರಳಿದ್ದರು. ಹತ್ಯೆಗೀಡಾಗಿದ್ದ ಟಿಎಂಸಿ ಕಾರ್ಯಕರ್ತ ಪೂಜೆಗೆ ತೆರಳಿದ್ದ ಪ್ರದೇಶದ ಜಿಲ್ಲೆ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿತ್ತು.