ನವದೆಹಲಿ:

ಪುಲ್ವಾಮ ದಾಳಿಯಾದ ನಂತರ ಭಾರತೀಯ ಸೇನೆಯ ಮೂರೂ ಬಲಗಳು ಸರ್ವಸನ್ನದ್ಧವಾಗಿ ನಿಂತಿದ್ದವು ಭೂಭಾಗದಲ್ಲಿ ಭೂಸೇನೆ ನಿಂತರೆ ವಾಯುಗಡಿಯೊಳಗೆ ಭಾರತೀಯ ವಾಯುಪಡೆ ಸನ್ನದ್ದವಾಗಿತ್ತು ಮತ್ತು ಕೆಲವರು ಹೇಳುವ ಪ್ರಕಾರ ಜಲ ಮಾರ್ಗದಿಂದ ಪಾಕಿಸ್ತಾನ ಅಟ್ಯಾಕ್ ಮಾಡಬಹುದು ಎಂಬ ಮುನ್ಸೂಚನೆಯಿಂದ ಭಾರತೀಯ ನೌಕಾ ಸೇನೆ ತನ್ನ ತಯಾರಿಯಲ್ಲಿ ತಾನಿತ್ತು ಅದರಿಂದ ಪಾಕಿಸ್ತಾನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.
ದಾಳಿ ನಂತರ ಭಾರತ-ಪಾಕ್ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್ ಮರೀನ್ ಹಾಗೂ ಇನ್ನೂ ಕೆಲವು ನಿರ್ಣಾಯಕ ನೌಕೆಗಳನ್ನು ಭಾರತೀಯ ನೌಕಾಪಡೆ ಯುದ್ಧ ಸನ್ನದ್ಧ ಸ್ತಿತಿಯಲ್ಲಿ ಇಟ್ಟಿತ್ತು. ಇದರಿಂದಾಗಿ ಪಾಕಿಸ್ತಾನ ಜಲ ಗಡಿಯಲ್ಲಿ ಬಾಲ ಬಿಚ್ಚದೇ ಇರುವಂತೆ ಮಾಡಲಾಗಿತ್ತು ಎಂದು ತಿಳಿಸಲಾಗಿದೆ .
ನೌಕಾಪಡೆ ಅಧಿಕಾರಿಗಳು ಈ ಮಾಹಿತಿಯನ್ನು ಮಾ.18 ರಂದು ಬಹಿರಂಗಪಡಿಸಿದ್ದಾರೆ. ಫೆ.14 ರಂದು ಪುಲ್ವಾಮ ಘಟನೆಯಾದ ಬೆನ್ನಲ್ಲೇ ಭಾರತೀಯ ನೌಕಾಪಡೆಯ 60 ಹಡಗುಗಳು, ಭಾರತೀಯ ಕಡಲ ಕಾವಲಿಗಿರುವ ಪಡೆಯ 12 ಹಡಗುಗಳು, 80 ಯುದ್ಧವಿಮಾನಗಳನ್ನು ಕಾರ್ಯಾಚರಣೆ ಮೋಡ್ ನಲ್ಲೇ ಇರಿಸಲಾಗಿತ್ತು. ಎಲ್ಲಾ ಮೂರು ಆಯಾಮಗಳಲ್ಲೂ ಸಹ ಭಾರತೀಯ ಸೇನೆ ಫೆ.14 ರಂದೇ ಸರ್ವ ಸನ್ನದ್ಧತೆ ತೋರಿದ್ದು ಪಾಕಿಸ್ತಾನಕ್ಕೆ ನಡುಕ ಉಂಟಾಗಿತ್ತು. ಇದರಿಂದಾಗಿ ಪಾಕಿಸ್ತಾನ ಜಲಗಡಿಯಲ್ಲೂ ಬಾಲ ಬಿಚ್ಚುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








