‘ಸತ್ತೆ ಪೆ ಸತ್ತಾ’ ರಿಮೇಕ್ ನಲ್ಲಿ ಹೃತಿಕ್-ದೀಪಿಕಾ!

ಮುಂಬೈ

      ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ‘ಸತ್ತೆ ಪೆ ಸತ್ತಾ’ ಚಿತ್ರದ ಅವತರಣಿಕೆಯಲ್ಲಿ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ.ರೋಹಿತ್ ಶೆಟ್ಟಿ ಹಾಗೂ ಫರಾ ಖಾನ್ ಒಟ್ಟಾಗಿ ‘ಸತ್ತೆ ಪೆ ಸತ್ತಾ’ ಅವತರಣಿಕೆ ಹೊರತರುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮುಖ್ಯ ಭೂಮಿಕೆಯಲ್ಲಿ ‘ಸತ್ತೆ ಪೆ ಸತ್ತಾ’ ಚಿತ್ರದಲ್ಲಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಚಿತ್ರ ಯಶಸ್ವಿಯಾಗಿತ್ತು.

     ಈ ಹಿಂದೆ ಅಮಿತಾಬ್ ಪಾತ್ರಕ್ಕಾಗಿ ಶಾರುಖ್ ಖಾನ್ ಹಾಗೂ ಹೇಮಾ ಮಾಲಿನಿ ಆಗಿ ಕತ್ರಿನಾ ಕೈಫ್ ಸಹಿ ಮಾಡಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್ ದಲ್ಲಿ ಹರಿದಾಡುತ್ತಿತ್ತು. ಆದರೀಗ ಹೃತಿಕ್ ಹಾಗೂ ದೀಪಿಕಾ ಈ ಚಿತ್ರ ಒಪ್ಪಿಕೊಂಡಿದ್ದಾರಂತೆ .ದೀಪಿಕಾ ಹಾಗೂ ಹೃತಿಕ್ ಒಟ್ಟಿಗೆ ನಟಿಸುವ ಇಚ್ಛೆಯನ್ನು ಅನೇಕ ಬಾರಿ ವ್ಯಕ್ತಪಡಿಸಿದ್ದರು.

      ಈ ಚಿತ್ರದ ಮೂಲಕ ಇಬ್ಬರು ಜೊತೆಯಾಗಿ ಅಭಿನಯಿಸುವ ಅವಕಾಶ ಒಂದು ಅವರಿಗೆ ಒಲಿದು ಬಂದಿದೆ.ಹೃತಿಕ್ ಮತ್ತು ದೀಪಿಕಾ ಈ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತಾರೆಂಬುದು ಫರಾ ಹಾಗೂ ರೋಹಿತ್‌ ಅವರ ಲೆಕ್ಕಾಚಾರವಂತೆ .ಫರಾ ಖಾನ್ ಚಿತ್ರಕಥೆ ಹೇಳಿದ ತಕ್ಷಣವೇ ದೀಪಿಕಾ ಸಮ್ಮತಿ ಸೂಚಿಸಿದ್ದಾರೆಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿವೆ. ಆದರೆ, ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಂದಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap