ನವದೆಹಲಿ
ಜಗತ್ತಿನಲ್ಲಿ ಇರುವ ಸುಮಾರು ಸಂಗೀತ ಪ್ರಕಾರಗಳಲ್ಲಿ ಹಿಂದುಸ್ತಾನಿ ಪ್ರಮುಖವಾದುದು ಇದನ್ನು ಕಲಿತರೆ ಸಾಕು ಆತ ಜಗತ್ತಿನ ಯಾವ ಪ್ರಕಾರವನ್ನು ಬೇಕಾದರು ಹಾಡಬಲ್ಲವನ್ನಾಗುತ್ತಾನೆ ಭಾರತದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಸಾಧನೆ ಮಾಡಿದವರು ಬೇಕಾದಷ್ಟು ಮಂದಿ ಇದ್ದಾರೆ ಅದರಲ್ಲಿ ತುಂಬಾ ವಿರಳ ಮತ್ತು ಕಠಿಣವಾದ ಕ್ಲಾಸಿಕಲ್ ಸಂಗೀತದಲ್ಲಿ ಪ್ರಖ್ಯಾತರಾದ ಶ್ರೀಮತಿ ಅನ್ನಪೂರ್ಣ ದೇವಿ(91) ಅವರು ಇಂದು ಮುಂಜಾನೆ ಮುಂಬೈಯ ಬ್ರೆಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ ಮೃತರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಅವರು ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/download-3.gif)